ಕರ್ನಾಟಕ

ಪುಂಡರ ಬೈಕ್ ವೀಲಿಂಗ್‌ ಹುಚ್ಚಾಟಕ್ಕೆ ಬೀಳುತ್ತಾ ಬ್ರೇಕ್‌?

ರಾಜಧಾನಿಯ ಮಾರ್ಗಗಳಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮಿತಿ ಮೀರುತ್ತಿದ್ದು, ತಮ್ಮ ಸಾಹಸವನ್ನು ಸೋಶಿಯಲ್‌ ಮೀಡಿಯಾದಲ್ಲೂ ಇವರು ಭರ್ಜರಿಯಾಗಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇವರ ಹಾವಳಿ ಹೆಚ್ಚುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಬೈಕ್ ವೀಲಿಂಗ್‌ ಹುಚ್ಚಾಟವು ಮಿತಿಮೀರಿದೆ. ರಾಜಧಾನಿಯ ಮಾರ್ಗಗಳಲ್ಲಿ ಪುಂಡರ ವ್ಹೀಲಿಂಗ್ ಹಾವಳಿ ಮಿತಿ ಮೀರುತ್ತಿದ್ದು, ತಮ್ಮ ಸಾಹಸವನ್ನು ಸೋಶಿಯಲ್‌ ಮೀಡಿಯಾದಲ್ಲೂ ಇವರು ಭರ್ಜರಿಯಾಗಿ ಅಪ್‌ಲೋಡ್‌ ಮಾಡುತ್ತಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಇವರ ಹಾವಳಿ ಹೆಚ್ಚುತ್ತಿದೆ.

ಬೈಕ್ ಹಿಡಿದು ವೀಲಿಂಗ್ ಮಾಡೋರ ಕೈಗೆ ಕೋಳಹಾಕೋಕೆ ಪೊಲೀಸರು ಇನ್ನೂ ಒದ್ದಾಡ್ತಾನೇ ಇದ್ದಾರೆ. ಆನೇಕಲ್ ಭಾಗದಲ್ಲಿ ಅತೀ ಹೆಚ್ಚಾಗಿ ವೀಲಿಂಗ್ ಮಾಡೋ ಪುಂಡರ ಸಂಖ್ಯೆ ಹೆಚ್ಚಾಗಿದೆ. ಪೋಷಕರ ಮಾತಿಗೆ ಕ್ಯಾರೇ ಅನ್ನದೆ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ವೀಲಿಂಗ್ ಮಾಡೋ ಕೆಲಸವನ್ನ ಮಾಡ್ತಿದ್ದಾರೆ. 

ಪುಂಡರ ಪುಂಡಾಟಿಕೆಯಿಂದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕ್ತಿದ್ದಾರೆ. ವೀಲಿಂಗ್ ಮಾಡ್ಕೊಂಡು ಬರೋರು ಪಾದಚಾರಿಗಳ ಮೇಲೆ ಬೈಕನ್ನ ಹರಿಸಿ ಸಂಕಷ್ಟಕ್ಕೀಡುಮಾಡ್ತಿದ್ದಾರೆ. ಎಷ್ಟೇ ಬಾರಿ ವಾರ್ನಿಂಗ್ ಕೊಟ್ರೂ ಕ್ಯಾರೇ ಅನ್ನದೇ ತಮ್ಮ ಚಾಳಿಯನ್ನ ತಾವು ಮುಂದುವರಿಸ್ತಿದ್ದಾರೆ. ವೀಲಿಂಗ್ ಹಾವಳಿಯ ಬಗ್ಗೆ ಪೊಲೀಸ್ ಠಾಣೆಗೆ ತೆರಳಿ ದೂರನ್ನ ನೀಡಿದ್ರೂ ಯಾವುದೇ ಆ್ಯಕ್ಷನ್ ತೆಗೆದುಕೊಳ್ತಿವೆಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.