ವೈರಲ್

ಎಲ್ಲಿದ್ದೀರಾ ಸಚಿವ ಜಮೀರ್ ಅಹಮದ್ ?

ಬಳ್ಳಾರಿ ಉಸ್ತುವಾರಿ ಸಚಿವರು ಬಾಣಂತಿಯರ ಸಾವಿಗೆ ಸ್ಪಂದಿಸಿಲ್ಲ

ಬಳ್ಳಾರಿ - ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರು ನಿಗೂಡವಾಗಿ ಸಾವನ್ನಪ್ಪುತ್ತಿದ್ದಾರೆ. ಕಳೆದ ಒಂದು ವಾರದ ಅಂತರದಲ್ಲಿ 7 ಬಾಣಂತಿಯರು ಅನಾರೋಗ್ಯಕ್ಕೆ ಸಿಲುಕಿದ್ದು , ಮೂವರು ಬಾಣಂತಿಯರು ಸಾವನ್ನಪ್ಪಿದ್ದಾರೆ. 

ಸಿಜರಿಯನ್ ಸೆಕ್ಷನ್ ಬಳಿಕ ಮೂವರು ಬಾಣಂತಿಯರು ಸಾವನ್ನಪ್ಪಿರುವ ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ವಿಪರ್ಯಾಸವೆಂದರೆ ಜಿಲ್ಲಾಸ್ಪತ್ರೆ ಸಾಲು ಸಾಲು ಯಡವಟ್ಟುಗಳು ಮಾಡುತ್ತಿದ್ರು , ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಮಾತ್ರ ಘಟನೆ ಬಗ್ಗೆ ಯಾವುದೇ ಮಾಹಿತಿ ಕೇಳಿಲ್ಲ ಬಂದಿಲ್ಲ ಎಂದು ಆಕ್ರೋಶ ಹೊರಹಾಕಲಾಗಿದೆ. 

ಘಟನೆ ಬಗ್ಗೆ ಜಿಲ್ಲಾಸ್ಪತ್ರೆ ವೈದ್ಯರಿಂದ ವರದಿ ಕೇಳಲಾಗಿದೆ. ಈ ಬಾಣಂತಿಯರ ಸಾವಿನ ಪ್ರಕರಣ ಸಿಎಂ ಗಮನಕ್ಕೂ ತರಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಗಮನ ನೀಡಿಲ್ಲ.