ದೇಶ

ಯಾವ ಏಜೆಂಟ್‌..? ಅಮೆರಿಕಗೆ ಹೇಗೆ ಹೋದ್ರು ಎಂದು ಪರಿಶೀಲನೆ : ಜೈಶಂಕರ್

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಪಂಜಾಬ್‌ ಮೂಲದ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಯುಎಸ್ ಗಡಿಯಲ್ಲಿ 20 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು ಮತ್ತು ನಂತರ ನನ್ನನ್ನು ವಾಪಸ್ ಕಳುಹಿಸಲಾಯಿತು ಎಂದಿದ್ದಾರೆ. ನಮ್ಮ ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಕಟ್ಟಲಾಯಿತು ಮತ್ತು ನಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು.

ಅಮೆರಿಕದಿಂದ ಮರಳಿರುವ  ಭಾರತೀಯ ಅಕ್ರಮ ವಲಸಿಗರ ಬಗ್ಗೆ ರಾಜ್ಯಸಭೆಗೆ ವಿದೇಶಾಂಗ ಇಲಾಖೆ ಸಚಿವ ಡಾ.ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ. ಅಮೆರಿಕದಿಂದ ಗಡಿಪಾರಾಗಿ ಹಿಂದಿರುಗಿರುವ ಪ್ರತಿಯೊಬ್ಬ ಭಾರತೀಯರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ, ಗಡಿಪಾರಾದವರು ಅಮೆರಿಕಕ್ಕೆ ಹೇಗೆ ಹೋದರು, ಏಜೆಂಟ್‌ ಯಾರು ಅಂತಾ ಪರಿಶೀಲನೆ ನಡೆಸುತ್ತಿದ್ದೇವೆ ಎಂದಿದ್ದಾರೆ.. ಅಷ್ಟೇ ಅಲ್ಲ ಇಂಥಾ ಘಟನೆಗಳು ಮುಂದುವರೆಯದಂತೆ ನಾವು ಹೇಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಅಂತಾ ಚರ್ಚೆ ನಡೆಸಿದ್ದೇವೆ. ಅಧಿಕಾರಿಗಳಿಗೂ ಮಾಹಿತಿ ನೀಡಿದ್ದೇನೆ ಅಂತಾ ವಿದೇಶಾಂಗ ಇಲಾಖೆ ಸಚಿವ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ. ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವಂತೆ ಇಂದು ಲೋಕಸಭೆ ‍& ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಈ ಬೆನ್ನಲ್ಲೇ ಇದೀಗ ಡಾ.ಎಸ್‌. ಜೈಶಂಕರ್‌ ಮಾಹಿತಿ ನೀಡಿದ್ದಾರೆ.

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ  ಪಂಜಾಬ್‌ ಮೂಲದ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಯುಎಸ್ ಗಡಿಯಲ್ಲಿ 20 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು ಮತ್ತು ನಂತರ ನನ್ನನ್ನು ವಾಪಸ್ ಕಳುಹಿಸಲಾಯಿತು ಎಂದಿದ್ದಾರೆ. ನಮ್ಮ ಕೈ ಮತ್ತು ಕಾಲುಗಳನ್ನು ಸರಪಳಿಯಿಂದ ಕಟ್ಟಲಾಯಿತು ಮತ್ತು ನಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ಅಮೃತಸರ ವಿಮಾನ ನಿಲ್ದಾಣವನ್ನು ತಲುಪಲು ನಮಗೆ 40 ಗಂಟೆಗಳು ಬೇಕಾಯಿತು. ಮಕ್ಕಳನ್ನು ಹೊರತುಪಡಿಸಿ ಎಲ್ಲರನ್ನೂ ಸರಪಳಿಯಲ್ಲಿ ಬಂಧಿಸಲಾಯಿತು. ಈಗ ನಾವು ಇಲ್ಲಿ ಕೃಷಿ ಮಾಡುತ್ತೇವೆ. ಸರ್ಕಾರ ನಮಗೆ ಸಹಾಯ ಮಾಡುತ್ತದೆ ಎಂದು ಸ್ಥಳೀಯ ಶಾಸಕರು ಹೇಳಿದ್ದಾರೆ.. ನಮ್ಮ ಹಣವನ್ನು ಮರಳಿ ಪಡೆಯಲು ಸಹಾಯ ಮಾಡುವಂತೆ ನಾವು ಸರ್ಕಾರವನ್ನು ವಿನಂತಿಸುತ್ತೇವೆ ಎಂದಿದ್ದಾರೆ.