ನಟ ಕೆ.ಶಿವರಾಂ: ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದ ಕೆ.ಶಿವರಾಮ್ ಅವರು ಈ ವರ್ಷ ನಮ್ಮನ್ನೆಲ್ಲ ಅಗಲಿದ್ದಾರೆ. ಬರೀ ಚಿತ್ರರಂಗ ಅಲ್ಲದೆ, ರಾಜಕಾರಣಿ ಹಾಗೂ ಮಾಜಿ ಐಎಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದ ಶಿವರಾಮ್, ಇದೇ ವರ್ದ ಆರಂಭದಲ್ಲಿ ಬದುಕಿನ ಪಯಣ ಮುಗಿಸಿದ್ರು. . 1993ರಲ್ಲಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಶಿವರಾಂ ಅವರು, ನಾಗತಿಹಳ್ಳಿ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ ಸಿನಿಮಾದಿಂದ ಹಿಡಿದು ವಸಂತ ಕಾವ್ಯ, ಖಳನಾಯಕ, ಸಾಂಗ್ಲಿಯಾನ-3, ಪ್ರತಿಭಟನೆ, ಯಾರಿಗೆ ಬೇಡ ದುಡ್ಡು, ಗೇಮ್ ಫಾರ್ ಲವ್ ಹಾಗೂ ಟೈಗರ್ ಸಿನಿಮಾಗಳನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು. ಆದರೆ, ಈ ವರ್ಷದ ಅಂದರೆ ಫೆಬ್ರವರಿ 29, 2024ರಂದು ಹೃದಯಾಘಾತದಿಂದ ಅವರು ನಿಧನ ಹೊಂದಿದರು.

ನಟ ದ್ವಾರಕೀಶ್: ಕನ್ನಡದ ಪ್ರಚಂಡ ಕುಳ್ಳ ದ್ವಾರಕೀಶ್ ತಮ್ಮ ಅಪ್ರತಿಮ ನಟನೆಯ ಮೂಲಕ ನಗಿಸುತ್ತಾ.. ನಗಿಸುತ್ತಲೇ ಕನ್ನಡಿಗರನ್ನ ಅಳಿಸಿ ಹೋದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾನದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ದ್ವಾರಕೀಶ್ ಅವರು ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಅಮೋಘ ಕೊಡುಗೆ ನೀಡಿದ್ದ ದ್ವಾರಕೀಶ್, ವಯೋಸಹಜ ಅನಾರೋಗ್ಯದಿಂದ 2024ರ ಏಪ್ರಿಎಲ್ 16ರಂದು ವಿಧಿವಶರಾದರು.

ಪವಿತ್ರಾ ಜಯರಾಮ್: ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದ ಕಿರುತೆರೆಯ ಜನಪ್ರಿಯ ನಟಿ ಪವಿತ್ರಾ ಜಯರಾಮ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾದರು. ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸಿ ಜನರ ಮನ ಗೆದ್ದಿದ್ದರು.
ಕನ್ನಡದ ರೋಬೋ ಫ್ಯಾಮಿಲಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಪಡೆದಿದ್ದರು. ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟನೆ ಮಾಡಿದ್ದರು. ಆದರೆ ಇದೇ ವರ್ಷದ ಅಂದರೆ 2024ರ ಮೇ 11ರಂದು ಆಂಧ್ರಪ್ರದೇಶದ ಕರ್ನೂಲು ಸಮೀಪ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.

ನಟಿ, ನಿರೂಪಕಿ ಅಪರ್ಣಾ: ಕನ್ನಡ ಕಿರುತೆರೆಯಲ್ಲಿ ತನ್ನ ಅಚ್ಛ ಕನ್ನಡದ ಧ್ವನಿಯಿಂದಲೇ ಖ್ಯಾತಿಯನ್ನ ಅಪರ್ಣಿದೇ ವರ್ಷ ಮಾತು ನಿಲ್ಲಿಸಿ ಬಿಟ್ಟರು. ದೂರದರ್ಶನ ನಿರೂಪಕಿಯಾಗಿ, ರೇಡಿಯೋ ಜಾಕಿಯಾಗಿ ಅಲ್ಲದೆ ಬೆಂಗಳೂರಿನ ನಮ್ಮ ಮೆಟ್ರೋಗೆ ಧ್ವನಿಯಾಗುವ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಅಪ್ಪಟ ಕನ್ನಡತಿ 2024ರ ಜುಲೈ 11ರಂದು ಶ್ವಾಸಕೋಶದ ಕ್ಯಾನ್ಸರ್‌ನಿಂದ ಅವರು ನಿಧರಾಗಿದ್ದರು. ಆದರೆ, ಅವರ ಮನಸಿಗೆ ಹಿತ ನೀಡುವ ಕನ್ನಡ ಮಾತ್ರ ಹಚ್ಚಹಸಿರಿನಂತೆ ಶಾಶ್ವತವಾಗಿದೆ.

ದೀಪಕ್ ಅರಸ್: ಕನ್ನಡ ಚಿತ್ರರಂಗದ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ಅವರ ಹಠಾತ್ ನಿಧನದ ಸುದ್ದಿ ಸ್ಯಾಂಡಲ್‌ವುಡ್‌ಗೆ ಶಾಕ್ ಆಗಿತ್ತು. ಕನ್ನಡದಲ್ಲಿ 2011ರಲ್ಲಿ ಬಂದಿದ್ದ ಮನಸಾಲಜಿ ಸಿನಿಮಾ ನಿರ್ದೇಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು, 2023ರಲ್ಲಿ ಶುಗರ್ ಫ್ಯಾಕ್ಟರಿ ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ ಅವರು ಕಿಡ್ನಿ ವೈಫಲ್ಯದಿಂದ ಅಕ್ಟೋಬರ್ 17ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ನಿರ್ದೇಶಕ ಗುರುಪ್ರಸಾದ್: ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಿರ್ದೇಶಕ-ನಟರಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಅವರ ಆತ್ಮಹತ್ಯೆ ವಿಚಾರ ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಅತೀ ದೊಡ್ಡ ಸುದ್ದಿಯಾಗಿತ್ತು.
ಮಠ, ಎದ್ದೇಳು ಮಂಜುನಾಥ ಮುಂತಾದ ಸಿನಿಮಾಗಳಿಂದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಗುರುಪ್ರಸಾದ್ ಮಾದನಾಯಕನಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ನವೆಂಬರ್ 3ರಂದು ಅವರ ಮೃತದೇಹ ಅಪಾರ್ಟ್‌ಮೆಂಟ್‌ನಲ್ಲ ಮೆಂಟ್‌ನಲ್ಲಿ ಪತ್ತೆಯಾಗಿತ್ತು. ಸಾಲದ ಸುಳಿಯಲ್ಲಿ ಸಿಲುಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನುವ ಮಾತುಗಳು ಕೇಳಿಬಂದಿತ್ತು. ಅವರ ನಿಧನದ ಬಳಿಕ ಕೆಲ ಕಲಾವಿದರು ಮಾತನಾಡಿದ ರೀತಿ ಚಂದನವನದಲ್ಲಿ ತುಂಬಾ ಚರ್ಚೆ ಆಗಿತ್ತು.

ನಟಿ ಶೋಭಿತಾ: ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯರಾಗಿದ್ದ ಶೋಭಿತಾ ಅವರು ಆತ್ಮಹತ್ಯೆ ಮಾಡಿಕೊಂಡ ವಿಚಾರ ಸದ್ದು ಮಾಡಿತ್ತು. 2024ರ ನವೆಂಬರ್ 30ರ ಮಧ್ಯರಾತ್ರಿ ಹೈದರಾಬಾದ್‌ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. ವಂದನ, ಎರಡೊಂದ್ಲ ಮೂರು. ಅಟೆಂಪ್ಟ್ ಟು ಮರ್ಡರ್ ಮುಂತಾದ ಚಿತ್ರಗಳಲ್ಲಿ ನಟನೆ ಮಾಡಿದ್ದರು. ಅವರ ಸಾವಿಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ.
