ಕರ್ನಾಟಕ

ಚನ್ನಪಟ್ಟಣ ಟಿಕೆಟ್‌ ಯಾರಿಗೆ? ಸಿಪಿವೈ ಅಥವಾ ನಿಖಿಲ್​ ಕುಮಾರ್​ಸ್ವಾಮಿ?

ಜೆಡಿಎಸ್ ನಾಯಕರ ಲೆಕ್ಕಾಚಾರವೆ ಬೇರೆಯಾಗಿದೆ. ಇದು ನಮ್ಮ ಕ್ಷೇತ್ರ ಅದರಲ್ಲೂ ಎಚ್​ಡಿಕೆ ಈಗ ಕೇಂದ್ರ ಸಚಿವರಾಗಿರುವುದರಿಂದ ಜೆಡಿಎಸ್ ಟಿಕೆಟ್ ಪಡೆದುಕೊಳ್ಳುವುದು ಪ್ರತಿಷ್ಠೆಯ ವಿಚಾರ ಆಗಿದೆ ಏಂಬುವುದು ಅವರ ಅಭಿಪ್ರಾಯ.

ರಾಮನಗರ: ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ಟಿಕೆಟ್ ಗಾಗಿ ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಹೇಗಾದರೂ ಸರಿ ಶತಾಯಗತಾಯ ಟಿಕೆಟ್ ಪಡೆಯಲೇಬೇಕೆಂದು ಸರ್ಕಸ್ ಮಾಡುತ್ತಿದ್ದಾರೆ. ಸಿ.ಪಿ ಯೋಗೇಶ್ವರ್ ದೆಹಲಿಗೆ ತೆರಳಿ ಅಲ್ಲಿ ಮೈತ್ರಿ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ಯೋಗೇಶ್ವರ್ ಅವರ ರಾಜಕೀಯ ನಡೆ ನಿರ್ಧಾರವಾಗಲಿದೆ. ಹಾಗಾಗಿ ಯೋಗೇಶ್ವರ್ ಪರ ಬ್ಯಾಟಿಂಗ್ ಮಾಡಲು ಬಿಜೆಪಿ ನಾಯಕರು ಕೂಡಾ ದೆಹಲಿಗೆ ತೆರಳಿದ್ದಾರೆ.

ಆದರೆ ಜೆಡಿಎಸ್ ನಾಯಕರ ಲೆಕ್ಕಾಚಾರವೆ ಬೇರೆಯಾಗಿದೆ. ಇದು ನಮ್ಮ ಕ್ಷೇತ್ರ ಅದರಲ್ಲೂ ಎಚ್ಡಿಕೆ ಈಗ ಕೇಂದ್ರ ಸಚಿವರಾಗಿರುವುದರಿಂದ ಜೆಡಿಎಸ್ ಟಿಕೆಟ್ ಪಡೆದುಕೊಳ್ಳುವುದು ಪ್ರತಿಷ್ಠೆಯ ವಿಚಾರ ಆಗಿದೆ ಏಂಬುವುದು ಅವರ ಅಭಿಪ್ರಾಯ.

ಒಂದು ಕಡೆ ಟಿಕೆಟ್ ಬೇಕೇಬೇಕೆಂದು ಹಠ ಹಿಡಿದಿರುವ ಸಿಪಿವೈ, ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ ಹೇಗಾದರೂ ರಾಜಕೀಯ ಸ್ಥಾನಮಾನ ಕೊಡಿಸಬೇಕು. ಅವನ ರಾಜಕೀಯ ಭವಿಷ್ಯವನ್ನು ಇನ್ನಷ್ಟು ಭದ್ರಗೊಳಿಸಬೇಕು ಎನ್ನುವುದು ಎಚ್ಡಿಕೆ ಲೆಕ್ಕಾಚಾರ.