ವಿದೇಶ

ಅಸ್ಸಾದ್‌ ಆಡಳಿತ ಕೊನೆಗೊಳಿಸಿದ ಅಬು ಮೊಹಮ್ಮದ್‌ ಅಲ್‌ ಗೊಲಾನಿ ಯಾರು..?

24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ. ಬಂಡುಕೋರರು ಡಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಅಸ್ಸಾದ್‌ ದೇಶ ಬಿಟ್ಟು ಪಲಾಯನ ಮಾಡಿದ್ಧಾರೆ. ಅಸ್ಸಾದ್‌ ಆಡಳಿತ ಕೊನೆಗಾಣಿಸುವಲ್ಲಿ 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ ಪ್ರಮುಖ ಪಾತ್ರ ವಹಿಸಿದಾರೆ.

ಡಮಾಸ್ಕಸ್‌: ಸಿರಿಯಾದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು, ಕಳೆದ 24 ವರ್ಷಗಳಿಂದ ಅಧಿಕಾರದಲ್ಲಿದ್ದ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ. ಬಂಡುಕೋರರು ಡಮಾಸ್ಕಸ್‌ ಪ್ರವೇಶಿಸುತ್ತಿದ್ದಂತೆ ಅಸ್ಸಾದ್‌ ದೇಶ ಬಿಟ್ಟು ಪಲಾಯನ ಮಾಡಿದ್ಧಾರೆ. ಅಸ್ಸಾದ್‌ ಆಡಳಿತ ಕೊನೆಗಾಣಿಸುವಲ್ಲಿ 42 ವರ್ಷದ ಅಬು ಮೊಹಮ್ಮದ್ ಅಲ್-ಗೊಲಾನಿ ಪ್ರಮುಖ ಪಾತ್ರ ವಹಿಸಿದಾರೆ.

ಬಶರ್‌ ಅಲ್‌ ಅಸ್ಸಾದ್‌ ಆಡಳಿತದ ವಿರುದ್ಧ ಸಿರಿಯಾದಲ್ಲಿ ಭಾರಿ ಜನಾಕ್ರೋಶವಿತ್ತು. ಜತೆಗೆ ಹಲವು ಬಂಡುಕೋರ ಸಂಘಟನೆಗಳು ನಿರಂತರವಾಗಿ ಅಸ್ಸಾದ್‌ ವಿರುದ್ಧ ಹೋರಾಟ ನಡೆಸುತ್ತಿದ್ದವು. ಈಗ ಅಬು ಮೊಹಮ್ಮದ್ ಅಲ್-ಗೊಲಾನಿ ನೇತೃತ್ವದ ಹಯಾತ್ ತಹ್ರಿರ್ ಅಲ್-ಶಾಮ್ ಬಂಡುಕೋರ ಸಂಘಟನೆ ದಂಗೆ ನಡೆಸಿ ಸಿರಿಯಾವನ್ನು ವಶಕ್ಕೆ ಪಡೆದಿದೆ. ಈ ಮೂಲಕ 50 ವರ್ಷಗಳ ಅಸ್ಸಾದ್‌ ಮನೆತನದ ಆಡಳಿಕ್ಕೆ ಕೊನೆ ಹಾಡಿದೆ.

ಇನ್ನು ಸಿರಿಯಾದ ನಾಗರಿಕ ದಂಗೆಯ ಮುಖ್ಯ ಸೂತ್ರಧಾರ ಅಬು ಮೊಹಮ್ಮದ್ ಅಲ್-ಗೊಲಾನಿ ಅವರ ಎಚ್ಟಿಎಸ್ಸಂಘಟನೆ.  ಈ ಸಂಘಟನೆ ಈ ಹಿಂದೆ ಅಪಾಯಕಾರಿ ಭಯೋತ್ಪಾದಕ ಗುಂಪು ಅಲ್-ಖೈದಾ ಜತೆ ಗುರುತಿಸಿಕೊಂಡಿತ್ತು. ಮೂಲತಃ ಅಲ್-ಖೈದಾದ ನುಸ್ರಾ ಫ್ರಂಟ್ ಭಾಗವಾಗಿದ್ದ ಎಚ್ಟಿಎಸ್ಸಿರಿಯಾದ ವಾಯುವ್ಯ ಇಡ್ಲಿಬ್ ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯ ಸಾಧಿಸಿತ್ತು. ಈ ಸಂಘಟನೆ ಈಗ ಸ್ಥಳೀಯ ಬುಡಕಟ್ಟು ಸಮುದಾಯಗಳ ಬೆಂಬಲ ಪಡೆದು ಉಗ್ರಗಾಮಿ ಸಂಘಟನೆ ಎಂಬ ಹಣೆಪಟ್ಟಿಯಿಂದ ಹೊರಬಂದಿದೆ.

ಇನ್ನು 2016ರಲ್ಲಿ ಅಲ್-ಖೈದಾದೊಂದಿಗಿನ ಸಂಬಂಧವನ್ನು ಕಡಿದುಕೊಂಡ ಅಲ್-ಗೊಲಾನಿ ತಮ್ಮ ಗುಂಪಿಗೆ ಜಬತ್ ಫತೇಹ್ ಅಲ್-ಶಾಮ್ ಮತ್ತು ನಂತರ ಹಯಾತ್ ತಹ್ರಿರ್ ಅಲ್-ಶಾಮ್ ಎಂದು ಮರುನಾಮಕರಣ ಮಾಡಿದ್ದರು. ಅಲ್-ಗೊಲಾನಿ ಅವರ ಆರಂಭಿಕ ದಿನವು ವಿವಾದಾಸ್ಪದವಾಗಿದ್ದರೂ ಪ್ರಸ್ತುತ ಸಿರಿಯಾವನ್ನು ಹೊಸ ದಿಸೆಯಲ್ಲಿ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಅವರು ಹಿಂದಿನ ಹಿಂಸಾತ್ಮಕ ಸಿದ್ಧಾಂತಗಳಿಂದ ದೂರವಿದ್ದು, ಸಿರಿಯಾ ಮರುನಿರ್ಮಾಣಕ್ಕೆ ಪಣತೊಟ್ಟಿದ್ದಾರೆ. ಆದರೆ ಸಿರಿಯಾ ಇನ್ನೂ ಛಿದ್ರವಾಗಿದೆ, ಜತೆಗೆ ಅಲ್ಲಿ ಹಲವು ಸಂಘಟನೆಗಳು  ಮತ್ತು ಅಂತಾರಾಷ್ಟ್ರೀಯ ಶಕ್ತಿಗಳು ಪ್ರಭಾವ ಬೀರುತ್ತಿರುವುದರಿಂದ  ದೇಶದ ಭವಿಷ್ಯ ಅನಿಶ್ಚಿತವಾಗಿ ಉಳಿದಿದೆ.