ಮಂಡ್ಯ : ಬೆಂಗಳೂರನ್ನ ಇಡೀ ಪ್ರಪಂಚವೇ ನೋಡುತ್ತಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಬದ್ಧತೆ ಇದೆ ಎಂದು ಮಂಡ್ಯದ ಟಿ. ಕೆ. ಹಳ್ಳಿಯಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಭಾಷಣದಲ್ಲಿ ಹೇಳಿದ್ದಾರೆ. ಈ ಯೋಜನೆಯನ್ನ ಇಡೀ ನಾಡಿಗೆ ಸಮರ್ಪಣೆ ಮಾಡುತ್ತವೆ. ಬೆಂಗಳೂರನ್ನ ಇಡೀ ಪ್ರಪಂಚವೇ ನೋಡುತ್ತಿದೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಬದ್ಧತೆ ಇದೆ. ನಾವು ಭಾವನಾತ್ಮಕವಾಗಿ ಹೋಗಲ್ಲ. ನಾವು ಕೆಲಸದ ಮೂಲಕ ಹೋಗುತ್ತೇವೆ ಎಂದು ಹೇಳಿದ್ದಾರೆ.
)
ಇದೇ ವೇಳೆ ಮಂಡ್ಯದಲ್ಲಿ ಮಾತನಾಡಿದ ಅವರು, ಈ ಯೋಜನೆ 2014ರಲ್ಲಿ ಆರಂಭವಾಗಿತ್ತು. ಸಿದ್ದರಾಮಯ್ಯನವರಿಗೆ ಒಂದು ಬದ್ಧತೆ ಇದೆ. ಟಿಬಿ ವಿಚಾರವಾಗಿ ನಮ್ಮ ಬಗ್ಗೆ ಟೀಕೆ ಮಾಡಿದ್ರು. ಆದರೆ ಐದೇ ದಿನದಲ್ಲಿ ದುರಸ್ತಿ ಕಾರ್ಯ ನಾವು ಮಾಡಿದ್ದೇವೆ. ನಾವೇ ಈ ಯೋಜನೆಯನ್ನ ಪ್ರಾರಂಭ ಮಾಡಿದ್ದೆವು. ಇದೀಗ ನಾವೇ ಉದ್ಘಾಟನೆ ಮಾಡಿದ್ದೇವೆ. ವಿಸಿ ನಾಲೆ ಆಧುನಿಕರಣಕ್ಕೆ ಸಿಎಂ, ಡಿಸಿಎಂ ಅನುದಾನ ಬಿಡುಗಡೆ ಮಾಡಬೇಕು. ಇದೇ ವೇಳೆ ಬಿಡಿಎಯಿಂದ 5 ಸಾವಿರ ವಿಶೇಷ ಅನುದಾನಕ್ಕೆ ಸಚಿವ ಚಲುವರಾಯಸ್ವಾಮಿ ಬೇಡಿಕೆ ಇಟ್ಟಿದ್ದಾರೆ.