ವಾಷಿಂಗ್ಟನ್: ಜಗತ್ತಿನ ನಂ. 1 ಶ್ರೀಮಂತ ಎಲಾನ್ ಮಸ್ಕ್ ಒಡೆತನದ 'X' ಸೋಷಿಯಲ್ ಮೀಡಿಯಾಗೆ ಟಕ್ಕರ್ ಕೊಡಲು 'Blueskyʼ ಆಗಮನವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬ್ಲೂಸ್ಕೈ ಸಾಕಷ್ಟು ಸದ್ದು ಮಾಡುತ್ತಿದೆ.
ಪ್ರತಿ ದಿನವೂ ಹೊಸ ಹೊಸ ಟೆಕ್ನಾಲಜಿ ಬಳಕೆದಾರರಿಗೆ ಲಭ್ಯವಾಗುತ್ತಿವೆ. ಜತೆಗೆ ಈಗ ಸಾಕಷ್ಟು ಬಳಕೆಯಲ್ಲಿರುವ ಸೋಷಿಯಲ್ ಮೀಡಿಯಾದಲ್ಲೂ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿವೆ. ಹೊಸದಾಗಿಯೂ ಕೆಲವೊಂದು ಸೋಷಿಯಲ್ ಮೀಡಿಯಾ ಫ್ಲಾಟ್‌ಫಾರಂಗಳು ಚಾಲ್ತಿಗೆ ಬಂದು ಜನಪ್ರಿಯವಾಗುತ್ತಿವೆ. ಈಗ ಜಗತ್ತಿನಾದ್ಯಂತ ಜಾಕ್ ಡೋರ್ಸೆ ಒಡೆತನದ ಬ್ಲೂಸ್ಕೈನದ್ದೇ ಸದ್ದು. ಲಕ್ಷ ಲಕ್ಷ ಜನರು ಬೇರೆ ಸೋಷಿಯಲ್ ಮೀಡಿಯಾ ತೊರೆದು ಬ್ಲೂ ಸ್ಕೈನತ್ತ ವಲಸೆ ಹೋಗ್ತಿದಾರೆ.
ಬ್ಲೂಸ್ಕೈ ಎಂಬುದು ಒಂದು ಮೈಕ್ರೋ ಸೋಷಿಯಲ್ ಮೀಡಿಯಾ ಬ್ಲಾಗಿಂಗ್ ವೇದಿಕೆ. 2019 ರಲ್ಲಿ ಟ್ವಿಟರ್‌ನ ಮಾಜಿ ಸಿಇಒ ಜಾಕ್ ಡೋರ್ಸೆ ಟ್ವಿಟ್ಟರ್ಗೆ ಪ್ರತಿಯಾಗಿ ಬ್ಲೂಸ್ಕೈ ಅಭಿವೃದ್ಧಿಪಡಿಸಿದ್ದರು. ಇಷ್ಟು ದಿನ ಹೆಚ್ಚು ಚಾಲ್ತಿಯಲ್ಲಿ ಇರದಿದ್ದ ಬ್ಲೂ ಸ್ಕೈ ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಹೆಚ್ಚು ಸದ್ದು ಮಾಡುತ್ತಿದೆ.
ಅದರಲ್ಲೂ ಎಲಾನ್ ಮಸ್ಕ್ ರ ಎಕ್ಸ್ ಖಾತೆಯಿಂದ ಲಕ್ಷಾಂತರ ಜನರು ಬ್ಲೂಸ್ಕೈ ಕಡೆಗೆ ವಲಸೆ ಹೋಗುತ್ತಿದ್ಧಾರೆ. ಅದೂ ಸಹ ಪ್ರತಿ ದಿನ ಸುಮಾರು 10 ಲಕ್ಷ ಎಕ್ಸ್ ಬಳಕೆದಾರರು ಬ್ಲೂಸ್ಕೈಗೆ ಲಾಗಿನ್ ಆಗ್ತಿದಾರೆ. ಈ ಹಿನ್ನೆಲೆಯಲ್ಲಿ ಬ್ಲೂಸ್ಕೈ ಈಗಾಗಲೇ 19 ಮಿಲಿಯನ್ ಬಳಕೆದಾರನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ಎಕ್ಸ್ ಅನ್ನೂ ಹಿಂದಿಕ್ಕುವ ಸಾಧ್ಯತೆ ಇದೆ.
ಎಲಾನ್ ಮಸ್ಕ್ ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರ ನಿಂತಿದ್ದರು. ಟ್ರಂಪ್ ಭರ್ಜರಿ ಜಯ ಗಳಿಸಿದ್ದು ಮುಂದಿನ ಅಧ್ಯಕ್ಷರಾಗಿ ಪದಗ್ರಹಣ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್‌ಗೂ ಸರ್ಕಾರದಲ್ಲಿ ಉನ್ನತ ಸ್ಥಾನಮಾನಗಳು ಸಿಕ್ಕಿವೆ. ಮಸ್ಕ್ ಸರ್ಕಾರದ ಭಾಗವಾಗುತ್ತಿರುವುದರಿಂದ ಬೇಸರ ಗೊಂಡಿರುವ ಲಕ್ಷಾಂತರ ಅಮೆರಿಕನ್ನು ಈಗಾಗಲೇ ಬ್ಲೂಸ್ಕೈಗೆ ವಲಸೆ ಹೋಗಿದಾರೆ.
ಇನ್ನು ಬ್ಲೂಸ್ಕೈ ಹಲವು ವೈಶಿಷ್ಟ್ಯಗೆಗಳನ್ನು ಹೊಂದಿದೆ. ಜತೆಗೆ ಬಳಕೆದಾರರಿಗೆ ವಿನೂತನ ಅನುಭವ ನೀಡುತ್ತೆ. ಈ ಹಿನ್ನೆಲೆಯಲ್ಲಿ ಬ್ಲೂಸ್ಕೈ ಬಳಕೆದಾರರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಮೆರಿಕ ಮತ್ತು ಯುರೋಪಿನ ರಾಷ್ಟ್ರಗಳಲ್ಲಿ ಬ್ಲೂಸ್ಕೈ ಜನಪ್ರಿಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದ ಇತರೆ ಭಾಗಗಳಲ್ಲಿಯೂ ಜನಪ್ರಿಯವಾಗುವ ನಿರೀಕ್ಷೆ ಇದೆ.