ಕರ್ನಾಟಕ

ಬಿಜೆಪಿ ತಟ್ಟೆಯ ಹೆಗ್ಗಣವನ್ನ ನಾವ್ಯಾಕೆ ತಗೆಯಬೇಕು : ಲಕ್ಷಣ ಸವದಿ

ಅಲ್ಲಿ ಬಹಳಷ್ಟು ಸ್ನೇಹಿತರು ಇದ್ದಾರೆ. ಅವರ ಖರ್ಚಿ ಉಳಿಸಿಕೊಳ್ಳಲು ಜನರನ್ನ ಡೈವರ್ಟ್ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ತಟ್ಟೆಯ ಹೆಗ್ಗಣ ನಾವ್ಯಾಕೆ ತಗೆಯಬೇಕು. ಅವರೇ ತಗೆದುಕೊಳ್ಳಲಿ ಎಂದು ಆರ್‌ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಖರ್ಚಿ ಚರ್ಚೆ ಜೋರಾಗಿದ್ದು, ಈ ಬಗ್ಗೆ ಶಾಸಕ ಲಕ್ಷಣ ಸವದಿ ಮಾತನಾಡಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಸವದಿ, ನಮ್ಮ ಯಾವ ಶಾಸಕರು, ಮಂತ್ರಿಗಳೂ ಈ ಚಿಂತೆ ಮಾಡುತ್ತಿಲ್ಲ. ಇದರ ಬಗ್ಗೆ ಮಾತಾಡುವ ಅವಶ್ಯಕತೆ ಇಲ್ಲ. ಜೊತೆಗೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಖರ್ಗೆ ಅವರು ಹೇಳಿದ್ದಾರೆ ಎಂದಿದ್ದಾರೆ

ಸಿಎಂ ಹುದ್ದೆಗೆ ಸಂಗೀತ ಖುರ್ಚಿ ಆರಂಭ ಎಂಬ ಅಶೋಕ್ ಹೇಳಿಕೆ ವಿಚಾರಕ್ಕೂ ಲಕ್ಷಣ ಸವದಿ ಪ್ರತಿಕ್ರಯಿಸಿದ್ದು, ಅಶೋಕ್ ಅವರಿಗೆ ಎನಾದ್ರೂ ಹೇಳಬೇಕು. ಅವರು ಮಾತನಾಡದಿದ್ರೆ ಮೇಲಿನವ್ರು ಕೇಳ್ತಾರೆ. ನಿಮ್ಮಲ್ಲಿ ಸಮಸ್ಯೆ ಹೆಚ್ಚಿದೆ ಮೊದಲು ಅದನ್ನ ನೋಡಿಕೊಳ್ಳಿ. ಅಲ್ಲಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ಚರ್ಚೆಯಿದೆ. ಅಲ್ಲಿ ಬಹಳಷ್ಟು ಸ್ನೇಹಿತರು ಇದ್ದಾರೆ. ಅವರ ಖರ್ಚಿ ಉಳಿಸಿಕೊಳ್ಳಲು ಜನರನ್ನ ಡೈವರ್ಟ್ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಅವರ ತಟ್ಟೆಯ ಹೆಗ್ಗಣ ನಾವ್ಯಾಕೆ ತಗೆಯಬೇಕು. ಅವರೇ ತಗೆದುಕೊಳ್ಳಲಿ ಎಂದು ಆರ್‌ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.