ಇಡೀ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ, ಒಗ್ಗಟ್ಟು ರಾಜಕೀಯವಿದೆ. ಆದ್ರೆ ಹಾಸನದಲ್ಲಿ ಮಾತ್ರ ಇದು ಉಲ್ಟಾ. ಅಂದ್ರೆ ಬಿಜೆಪಿ ನಾಯಕನಿಗೂ ಜೆಡಿಎಸ್ ನಾಯಕರಿಗೂ ಬಿಲ್ ಕುಲ್ ಆಗೋದೇ ಇಲ್ಲ. ಇತ್ತ ಕಾಂಗ್ರೆಸ್ ನವರೂ ಜೆಡಿಎಸ್ ನ ಮುಳುಗಿಸೋಕೆ ಯತ್ನಿಸುತ್ತಿದ್ದಾರೆ. ಇಂಥಾ ಹೊತ್ತಲ್ಲೇ ಶತ್ರುವಿನ ಶತ್ರು ಎನಗೆ ನಿತ್ರ ಅನ್ನೋ ತರ ಹಾಸನದಲ್ಲಿ, ಕಾಂಗ್ರೆಸ್ ನಾಯಕ ಹಾಗೂ ಬಿಜೆಪಿ ನಾಯಕ ಒಂದಾಗಿದ್ದಾರೆ. ಅಂದ್ರೆ ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಹಾಗೂ ಕಾಂಗ್ರೆಸ್ ಸಂಸದ ಶ್ರೇಯಸ್ ಪಟೇಲ್ ನಡುವೆ ಫ್ರೆಂಡ್ ಶಿಪ್ ಶುರುವಾಗಿದೆ. ಇದರಿಂದ ಪ್ರೀತಂ ಗೌಡ ಕೂಡ ಕಾಂಗ್ರೆಸ್ ಸೇರುತ್ತಾರಾ ಎಂಬ ಗುಮಾನಿ ಎದ್ದಿದೆ.
ಹಾಸನದಲ್ಲಿ ರೇವಣ್ಣ ಕುಟುಂಬವನ್ನು ಬಗ್ಗು ಬಡಿಯಲು ಆಜಕೀಯ ಮಹಾಯುದ್ಧವೇ ನಡೆಯುತ್ತಿದೆ. ಇದಕ್ಕಾಗಿ ಶ್ರೇಯಸ್ ಪಟೇಲ್ ಪಾಲಿಗೆ, ಪ್ರೀತಂ ಗೌಡ ರಾಜಕೀಯ ಗುರು ಆಗುತ್ತಿದ್ದಾರಂತೆ. ಎಂಪಿ ಚುನಾವಣೆಯಲ್ಲಿ ಬಹಿರಂಗವಾಗಿ ಶ್ರೇಯಸ್ ಪಟೇಲ್ಗೆ ಸಹಾಯ ಮಾಡಿದ್ದ ಪ್ರೀತಂ ಬೆಂಬಲಿಗರು, ಇಂದಿಗೂ ಅದನ್ನೆ ಮುಂದುವರಿಸಿಕೊಂಡು ಬರುತ್ತಿದ್ದಾರೆ ಎನ್ನಲಾಗುತ್ತಿದೆ.