ಹಾವೇರಿ: 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಸ್ವೀಪ್ ಚುನಾವಣಾ ರಾಯಭಾರಿಯಾಗಿದ್ದ ಸ.ರಿ.ಗ.ಮ.ಪ. ಖ್ಯಾತಿಯ ಹನುಮಂತ ಲಮಾಣಿ, ಸದ್ಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿದ್ದಾರೆ.
ಇದೇ ತಿಂಗಳು(13/11/2024) ನಡೆಯುವ ಶಿಗ್ಗಾಂವಿ ಉಪಚುನಾವಣೆಗೆ ಬಂದು ಮತಹಾಕಲು Colors Kannada (ಕಲರ್ಸ್ ಕನ್ನಡ) ವಾಹಿನಿ ಮುಖ್ಯಸ್ಥರು ಹಾಗೂ ಬಿಗ್‌ಬಾಸ್ ರಿಯಾಲಿಟಿ ಶೋ ಅಯೋಜಕರು ಉಪಚುನಾವಣೆಯ ಮತದಾನದ ದಿನ ಮತ ಹಾಕಲು ಕಳುಹಿಸಿಕೊಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವವನ್ನು ಎತ್ತಿಹಿಡಿಯುತ್ತಾರಾ ಎಂದು ಕಾದು ನೋಡಬೇಕಿದೆ.
ಈ ಕುರಿತು ಚುನಾವಣಾಧಿಕಾರಿಗಳು ( SVEEP Haveri) ಈ ಬಗ್ಗೆ ವಿಶೇಷ ಗಮನಹರಿಸಿ ಚುನಾವಣಾ ರಾಯಭಾರಿಯನ್ನು ಮತ ಹಾಕುವಂತೆ ಮಾಡಿ, ಜನರಲ್ಲಿ ಜಾಗೃತಿ ಮೂಡಿಸಿ ಮಾದರಿಯಾಗಬೇಕೆಂದು ಹನುಮಂತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ.