ಬಿಗ್‌ಬಾಸ್ ಮನೆಯಲ್ಲಿ ಹೊಸ ಟಾಸ್ಕ್ ಶುರುವಾಗಿದೆ. ಮನೆಗೆ ಬೇಕಾದ ದಿನಸಿ ಸಾಮಾಗ್ರಿಗಳನ್ನ ಗಳಿಸಿ ಕೊಡುವ ಸಾಮರ್ಥ್ಯ ಇರುವ 6 ಸದಸ್ಯರು ಯಾರು ಎಂದು ಘೋಷಿಸಬೇಕೆಂದು ಭವ್ಯ ತಿಳಿಸಿದ್ದಾರೆ. ಈ ವೇಳೆ ಎಲ್ಲ ಸ್ಪರ್ಧಿಗಳು ನಾನು.. ನಾನು ಎನ್ನುವಂತೆ ಕೈ ಮೇಲೆ ಎತ್ತಿದ್ದರು. ಆದ್ರೆ ಉಗ್ರಂ ಮಂಜು ಓವರ್ ಕನ್ಫಿಡೆನ್ಸ್ ತೋರಿ ಆಟದ ಅಕಾಡಕ್ಕಿಳಿದು ಟಾಸ್ಕ್ ಸೋತಿದ್ದಾರೆ.