ವೈರಲ್

ಫೈನಾನ್ಸ್‌ ಕಟ್ಟದೇ ಬಾಕಿ ಉಳಿಸಿಕೊಂಡ ಮಹಿಳೆಗೆ ತರಾಟೆ..!

ಬೆಳಗಾವಿ ತಾಲೂಕಿನ ಹಾಲಬಾವಿ ಎಂಬ ಗ್ರಾಮದಲ್ಲಿ, ಖಾಸಗಿ ಫೈನಾನ್ಸ್‌ ಕಂಪನಿಗೆ ಏಜೆಂಟರ್‌ ಆಗಿ ಕೆಲಸ ಮಾಡಿದ್ದ ಯಲ್ಲವ್ವ ಎಂಬುವರ ಮನೆ ಮೇಲೆ ಮುತ್ತಿಗೆ ಹಾಕಲಾಗಿದೆ.

ಬೆಳಗಾವಿ ತಾಲೂಕಿನ ಹಾಲಬಾವಿ ಎಂಬ ಗ್ರಾಮದಲ್ಲಿ, ಖಾಸಗಿ ಫೈನಾನ್ಸ್‌ ಕಂಪನಿಗೆ ಏಜೆಂಟರ್‌ ಆಗಿ ಕೆಲಸ ಮಾಡಿದ್ದ ಯಲ್ಲವ್ವ ಎಂಬುವರ ಮನೆ ಮೇಲೆ ಮುತ್ತಿಗೆ ಹಾಕಲಾಗಿದೆ. ಮಧ್ಯಸ್ಥಿಕೆ ವಹಿಸಿ ಫೈನಾನ್ಸ್‌ ಕಂಪನಿಗೆ ಹಣ ಕಟ್ಟಿಸಿದ್ದ ಆರೋಪ ಮಾಡಿ, ನೂರಾರು ಮಹಿಳೆಯರು ಮುತ್ತಿಗೆ ಹಾಕಿದ್ದಾರೆ.

ಎರಡು ತಿಂಗಳಿನಿಂದ ಜನರು ನೀಡಿದ್ದ ಹಣವನ್ನು ಫೈನಾನ್ಸ್‌ ಕಟ್ಟದೇ, ಯಲ್ಲವ್ವ ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿ, ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಡಿಸಿಪಿ ರೋಹನ್‌ ಜಗದೀಶ್‌ ಎಲ್ಲರ ಮನವೊಲಿಸಿ, ಆರೋಪಿತ ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆ ಹಾಲಬಾವಿ ಗ್ರಾಮದ ಕಾಕತಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.