ವೈರಲ್

ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ..!

ಪವನ್ ಖಾಸಗಿ ಆಸ್ಪತ್ರೆ ಎದುರು ಮಹಿಳೆಯ ಶವ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಗೆ ಗರ್ಭಕೋಶ ಕಾಯಿಲೆ ಸಂಬಂಧ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ. ಅವರ ಯಡವಟ್ಟಿನಿಂದ ಶಾಂತಮ್ಮ ಸಾವನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಲಾರ : ಜಿಲ್ಲೆಯ ಶ್ರೀನಿವಾಸಪುರದ ಪವನ್ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವನಪ್ಪಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಶಾಂತಮ್ಮ(35) ಎಂಬ ಮಹಿಳೆ ಶ್ರೀನಿವಾಸಪುರ ತಾಲ್ಲೂಕು ಕಮಲವಾರಿಪಲ್ಲಿಯ ಗ್ರಾಮದ ಮೃತಪಟ್ಟ ದುರ್ಧೈವಿ.

ಗ್ರಾಹಕ ಜಾಗೃತಿ | ವೈದ್ಯರು ಚಿಕಿತ್ಸೆ ನೀಡುವಾಗ ಕೇರ್‌ಲೆಸ್‌ ಮಾಡಿದರೆ ಏನು ಮಾಡಬೇಕು? -  Vistara News

ಪವನ್ ಖಾಸಗಿ ಆಸ್ಪತ್ರೆ ಎದುರು ಮಹಿಳೆಯ ಶವ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಮಹಿಳೆಗೆ ಗರ್ಭಕೋಶ ಕಾಯಿಲೆ ಸಂಬಂಧ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದಿದ್ದ ವೇಳೆ ಈ ಅವಘಡ ಸಂಭವಿಸಿದೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ. ಅವರ ಯಡವಟ್ಟಿನಿಂದ ಶಾಂತಮ್ಮ ಸಾವನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಾ. ವೇಣುಗೋಪಾಲ್ ಹಾಗೂ ಅವರ ಪತ್ನಿ ಡಾ. ಕವಿತ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಶವದೊಂದಿಗೆ ಇಡೀ ರಾತ್ರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ವೈದ್ಯರಾದ ವೇಣುಗೋಪಾಲ್ ಹಾಗೂ ಕವಿತ ವಿರುದ್ದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.