ಬೆಳಗಾವಿ : ಬಾಣಂತಿಯರಿಗೆ ಕರೆ ಮಾಡಿ ಆನ್ ಲೈನ್ ನಲ್ಲಿ ಹಣ ದೋಚುತ್ತಿರುವ ಪ್ರಕರಣ ಸಂಬಂಧ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಕ್ರಿಯಿಸಿದ್ದಾರೆ. ಪೋಶನ್ ಯೋಜನೆ ಹೆಸರು ಅಧಿಕಾರಿಗಳು ಅಂತಾ ಕರೆ ಮಾಡುತ್ತಾರೆ. ನಿಮ್ಮ ಅಕೌಂಟ್ ಗೆ 7,500 ಹಣ ಹೋಗುತ್ತೆ ಅಂತಾ ಹೇಳ್ತಾರೆ. ಬಾಣಂತಿಯರಿಗೆ ಹಣ ಬಂದಿದೆ ನಂಬಿಸುತ್ತಾರೆ. ಗೂಗಲ್ ಫೇ ಓಪನ್ ಮಾಡಿ ಅಂತಾ ಹೇಳಿ. ಒಂದು ಲಿಂಕ್ ಕಳುಹಿಸುತ್ತೇನೆ ಅದನ್ನ ಓಪನ್ ಮಾಡಿ ಅಂತಾರೆ. ಲಿಂಕ್ ಕ್ಲಿಕ್ ಮಾಡಿದ್ರೆ ಎಲ್ಲಾ ದುಡ್ಡು ಅವರ ಅಕೌಂಟ್ ಗೆ ಹೋಗುತ್ತೆ ಎಂದು ಮಾರ್ಟಿನ್ ಎಚ್ಚರಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮಾರ್ಟಿನ್ ಅವರು, ಈಗಾಗಲೇ ಐದು ಜನ ಬಾಣಂತಿಯರಿಗೆ ಮೋಸ ಆಗಿದೆ. 82 ಸಾವಿರ ಹಣ ಬಾಣಂತಿಯರು ಕಳೆದುಕೊಂಡಿದ್ದಾರೆ. ಈ ಕುರಿತು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನ್ ಲೈನ್ ವಂಚಕರಿಗೆ ನಂಬರ್ ಗಳು ಹೇಗೆ ಸಿಕ್ಕಿವೆ. ಡಾಟಾ ಎಲ್ಲಿಂದ ಕಲೆಕ್ಟ್ ಮಾಡಿದ್ದಾರೆ ಅಂತಾ ತನಿಖೆ ಮಾಡ್ತಿದ್ದೇವೆ. ವಂಚನೆ ಮಾಡಿದವರ ವಿರುದ್ಧ ತನಿಖೆ ಶುರು ಮಾಡಿದ್ದು, ಆರೋಪಿಗಳ ಮಾಹಿತಿ ಕಲೆ ಹಾಕ್ತಿದ್ದೇವೆ. ಯಾರಿಗೆ ಕರೆ ಮಾಡಿ ಹಣ ಹಾಕುತ್ತೇವೆ ಲಿಂಕ್ ಓಪನ್ ಮಾಡಿ ಅಂದ್ರೆ ಮಾಡಬೇಡಿ. ಯಾರು ಕೂಡ ಓಟಿಪಿ ಹೇಳಬೇಡಿ, ಲಿಂಕ್ ಓಪನ್ ಮಾಡಬೇಡಿ ಅಂತಾಸಾರ್ವಜನಿಕರಿಗೆ ಹಾಗೂ ಬಾಣಂತಿಯರು, ಗರ್ಭಿಣಿಯರಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮನವಿ ಮಾಡಿದ್ದಾರೆ.