ಕರ್ನಾಟಕ

ನಾಲೆಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆಯ ಮೃತದೇಹ

ನಾಲೆಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ತೇಲಿ ಬಂದಿದ್ದು, ಎರಡ್ಮೂರು ದಿನಗಳ ಹಿಂದೆ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದ ವಿಸಿ ನಾಲೆಯಲ್ಲಿ, ಅಪರಿಚಿತ ಮಹಿಳೆಯ ಶವ ತೇಲಿ ಬಂದಿದೆ. ಮೃತದೇಹ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಪರಿಶೀಲನೆ ವೇಳೆ ಎರಡ್ಮೂರು ದಿನಗಳ ಹಿಂದೆ ಮಹಿಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆಯಾಗಿದೆ.