ವೈರಲ್

ಗಾರೆ ಕೆಲಸ ಮಾಡ್ತಿದ್ದವ ಇಂದು ಕೋಟಿ ಒಡೆಯ.. ಸೈಟ್ ಖರೀದಿಸಿದವರಿಗೆ ಶುರುವಾಯ್ತು ನಡುಕ

ನನ್ನ ಸ್ನೇಹಿತರು ಜಯರಾಮ್ ಬಳಿ ಸೈಟ್ ಖರೀದಿ ಮಾಡಿದ್ದಾರೆ. ಕಚೇರಿ ಮೇಲೆ ಇಡಿ ದಾಳಿ ಆಗಿದೆ ಎಂದು ಗೊತ್ತಾಗಿ ನನ್ನನ್ನ ಕಳುಹಿಸಿದ್ರು. ಅದಕ್ಕಾಗಿ ನಾನು ಕೂಡ ಇಲ್ಲಿಗೆ ಬಂದಿದ್ದೇನೆ. ನಮ್ಮ ಸ್ನೇಹಿತರು ಕೂಡ ಜಯರಾಮ್ ಬಗ್ಗೆ ಹೇಳಿದ್ದಾರೆ.

ಮೈಸೂರು : ಜಿಲ್ಲೆಯಲ್ಲಿ ಇಡಿ ಕಾರ್ಯಾಚರಣೆ ನಡೆದಿದ್ದು, ಎಂಎಂಜಿ ಕನ್ಸ್ಟ್ರಕ್ಷನ್ ಜಯರಾಮ್ ಬಳಿ ಸೈಟ್ ಖರೀದಿ ಮಾಡಿದವರಿಗೆ ನಡುಕ ಶುರುವಾಗಿದೆ. ಎಂಎಂಜಿ ಕನ್ಸ್ಟ್ರಕ್ಷನ್ ಮೇಲೆ ಇಡಿ ರೈಡ್ ಆಗುತ್ತಿದ್ದಂತೆ ಖರೀದಿದಾರರು ಬೆಚ್ಚಬಿದ್ದಿದ್ದಾರೆ. ಸೈಟ್ ಖರೀದಿ ಮಾಡಿದವರು ಹಾಗೂ ಖರೀದಿ ಮಾಡಿದ ಸಂಬಂದಿಗಳು ಜಯರಾಮ್ ಕಚೇರಿ ಬಳಿಗೆ ಆಗಮಿಸಿದ್ದಾರೆ. ಸೈಟ್ ಖರೀದಿ ಮಾಡಿದವರು ಆತಂಕದಿಂದಲೇ ಕಚೇರಿ ಬಳಿಗೆ ಆಗಿಸುತ್ತಿದ್ದಾರೆ.

ಇದೆ ರೀತಿ ಕಚೇರಿ ಬಳಿ ಆಗಮಿಸಿದ ಸಂತೋಷ್ ಎಂಬುವರು ಮಾತನಾಡಿದ್ದು, ನನ್ನ ಸ್ನೇಹಿತರು ಜಯರಾಮ್ ಬಳಿ ಸೈಟ್ ಖರೀದಿ ಮಾಡಿದ್ದಾರೆ. ಕಚೇರಿ ಮೇಲೆ ಇಡಿ ದಾಳಿ ಆಗಿದೆ ಎಂದು ಗೊತ್ತಾಗಿ ನನ್ನನ್ನ ಕಳುಹಿಸಿದ್ರು. ಅದಕ್ಕಾಗಿ ನಾನು ಕೂಡ ಇಲ್ಲಿಗೆ ಬಂದಿದ್ದೇನೆ. ನಮ್ಮ ಸ್ನೇಹಿತರು ಕೂಡ ಜಯರಾಮ್ ಬಗ್ಗೆ ಹೇಳಿದ್ದಾರೆ. ಕೆಲ ವರ್ಷಗಳ ಹಿಂದೆ ಜಯರಾಮ್ ಗಾರೆ ಕೆಲಸ ಮಾಡುತ್ತಿದ್ದರಂತೆ. ಗಾರೆ ಕೆಲಸಕ್ಕೆ ಬಂದವರು ಕೋಟಿ ಕೋಟಿ ಮಾಡಿದ್ದಾರೆ. ಇಂತಹ ವ್ಯಕ್ತಿ ಈಗ ಏಕಾಏಕಿ ಕೋಟ್ಯಧಿಪತಿ ಆಗಲಿಕ್ಕೆ ಕಾರಣ ಏನು. ಸೈಟ್ ಪಡೆದ ನಮ್ಮ ಸ್ಮೆಹಿತರಿಗೂ ಈಗ ಆತಂಕ ಇದೆ. ಹಲವರು ಹಣ ಕೊಟ್ಟಿದ್ದಾರೆ. ಸೈಟ್‌ ಗಳು ರಿಜಿಸ್ಟರ್ ಆಗಿಲ್ಲ. ಇದರಿಂದ ಎಲ್ಲರಿಗೂ ಭಯ ಶುರುವಾಗಿದೆ ಎಂದು ಮೈಸೂರಿನ ನಿವಾಸಿ ಸಂತೋಷ್ ಹೇಳಿದ್ದಾರೆ.