ವಿದೇಶ

ಪಾಕಿಸ್ತಾನದ ನೆರವಿಗೆ ವಿಶ್ವಬ್ಯಾಂಕ್‌..!

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಮುಂದಿನ ‌ಹತ್ತು ವರ್ಷಗಳು ಜನರ ಜೀವನಮಟ್ಟ ಸುಧಾರಣೆಗಾಗಿ 1.71 ಲಕ್ಷ ಕೋಟಿ ಸಾಲ ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿದೆ.

ಇಸ್ಲಾಮಾಬಾದ್‌: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಮುಂದಿನ ‌ಹತ್ತು ವರ್ಷಗಳು ಜನರ ಜೀವನಮಟ್ಟ ಸುಧಾರಣೆಗಾಗಿ 1.71 ಲಕ್ಷ ಕೋಟಿ ಸಾಲ ನೀಡಲು ವಿಶ್ವ ಬ್ಯಾಂಕ್‌ ಅನುಮೋದನೆ ನೀಡಿದೆ.         
ಈ ಕಾರ್ಯಕ್ರಮಕ್ಕೆ 'ಪಾಕಿಸ್ತಾನ ರಾಷ್ಟ್ರೀಯ ಪಾಲುದಾರಿಕೆ ಚೌಕಟ್ಟು 2025 - 2035' ಎಂಬ ಶೀರ್ಷಿಕೆ ನೀಡಲಾಗಿದೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಮುಖ ಆರು ವಲಯಗಳ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಈ ಪ್ಯಾಕೇಜ್‌ ಅನ್ನು ವಿಶ್ವ ಬ್ಯಾಂಕ್‌ ಪ್ರಕಟಿಸಿದೆ. ನಿಗದಿತ ಅವಧಿ ಮುಗಿಯುವವರೆಗೂ ಆರ್ಥಿಕ ನೆರವು ನೀಡಲಾಗುವುದು. ಹಾಗಾಗಿ, ದೇಶದಲ್ಲಿ ರಾಜಕೀಯ ಪಕ್ಷಗಳ ಅಧಿಕಾರಾವಧಿ ಬದಲಾವಣೆಯಾದರೂ ಈ ಕಾರ್ಯಕ್ರಮಕ್ಕೆ ಆರ್ಥಿಕ ನೆರವು ಸ್ಥಗಿತಗೊಳ್ಳುವುದಿಲ್ಲ ಎಂದು ವಿಶ್ವಬ್ಯಾಂಕ್‌ ಸ್ಪಷ್ಟ ಪಡಿಸಿದೆ.