ವೈರಲ್

ಅಬ್ಬಾಬ್ಬಾ .. ಈ ಮೀನಿನ ಬೆಲೆ ಕೇಳಿದ್ರೆ ಶಾಕ್ ಆಗ್ತಿರಾ..!

ಅರಳದಿನ್ನಿ ಗ್ರಾಮದ ಮೀನುಗಾರರಾದ ಯಲಗೂರದಪ್ಪ ಮಾದರ ಹಾಗೂ ಕೃಷ್ಣಾ ಮಾದರ ಎಂಬುವವರ ಗಾಳಕ್ಕೆ 46 ಕೆಜಿ ತೂಕದ ಹದ್ದು ಜಾತಿಯ ಮೀನು ಸಿಕ್ಕಿದೆ.

ವಿಜಯಪುರ : ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿಯಲ್ಲಿ ಭಾರಿ ಗಾತ್ರದ ಮೀನೊಂದು ಪತ್ತೆಯಾಗಿದೆ.  ಅರಳದಿನ್ನಿ ಗ್ರಾಮದ ಮೀನುಗಾರರಾದ ಯಲಗೂರದಪ್ಪ ಮಾದರ ಹಾಗೂ ಕೃಷ್ಣಾ ಮಾದರ ಎಂಬುವವರ ಗಾಳಕ್ಕೆ 46 ಕೆಜಿ ತೂಕದ ಹದ್ದು ಜಾತಿಯ ಮೀನು ಸಿಕ್ಕಿದೆ. 

ಈ ಬಗ್ಗೆ ಮೀನುಗಾರ ಯಲಗೂರದಪ್ಪ ಮಾದರ ಅವರು ಮಾತನಾಡಿ, ಬೃಹತ್ ಗಾತ್ರದ ಮೀನನ್ನು ದಡಕ್ಕೆ ತರಲು ಕಷ್ಟವಾಯಿತು. 18 ವರ್ಷಗಳಿಂದ ಮೀನು ಹಿಡಿಯುತ್ತಿದ್ದೇವೆ. ಅಪರೂಪದ ಹದ್ದು ಜಾತಿಯ ಮೀನನ್ನ ಇದೇ ಮೊದಲನೇ ಸಲ ನೋಡಿದ್ದು. ಈ ಮೀನನ್ನು ಸಗಟು ಮೀನು ವ್ಯಾಪಾರಿ ನಿಜಪ್ಪ ಮಾದರ ಕೆಜಿಗೆ ₹ 300 ದಂತೆ ಖರೀದಿಸಿದರು ಎಂದರು. ಇದು ಕ್ಯಾಟ್ ಫಿಶ್ ಜಾತಿಗೆ ಸೇರಿದ ಮೀನು. ಅಷ್ಟೇನು ರುಚಿ ಇರಲ್ಲ, ತಿನ್ನೋಕು ಇಷ್ಟ ಅಗಲ್ಲ, ನಮ್ಮಲ್ಲಿ ಕೆ.ಜಿ ಗೆ 70-80 ರೂಗೆಲ್ಲ ಸಿಗುತ್ತದೆ ಎಂದು ಹೇಳಿದ್ಧಾರೆ.