ದೇಶ

ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವೃದ್ಧಿಮಾನ್ ಸಹಾ ನಿವೃತ್ತಿ ಘೋಷಣೆ

ವೃದ್ಧಿಮಾನ್ ಸಹಾ ಟೀಂ ಇಂಡಿಯಾ ಪರವಾಗಿ 2010 ರಿಂದ 2021 ರವರೆಗೆ ಭಾರತಕ್ಕಾಗಿ 40 ಟೆಸ್ಟ್ ಪಂದ್ಯ, 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ..

ಟೀಂ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.. ಕಳೆದ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದರು.. ತಮ್ಮ ವೃತ್ತಿಜೀವನದ ಕೊನೆಯ ರಣಜಿ ಪಂದ್ಯವನ್ನು ಆಡುವ ಮೂಲಕ ಎಲ್ಲಾ ತರಹದ ಕ್ರಿಕೆಟ್‌ ನಿವೃತ್ತಿ ಹೇಳಿದ್ದಾರೆ.. ವೃದ್ಧಿಮಾನ್ ಸಹಾ ಟೀಂ ಇಂಡಿಯಾ ಪರವಾಗಿ 2010 ರಿಂದ 2021 ರವರೆಗೆ ಭಾರತಕ್ಕಾಗಿ 40 ಟೆಸ್ಟ್ ಪಂದ್ಯ, 9 ಏಕದಿನ ಪಂದ್ಯಗಳನ್ನು ಆಡಿದ್ದಾರೆ.. ಸಹಾ ತಮ್ಮ ವೃತ್ತಿ ಜೀವನದಲ್ಲಿ 16 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು.. ಮಹೇಂದ್ರ ಸಿಂಗ್‌ ಧೋನಿ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.. ಧೋನಿ ನಿವೃತ್ತಿಯ ನಂತರ ಕೆಲವು ವರ್ಷಗಳ ಕಾಲ ಟೆಸ್ಟ್ ತಂಡದಲ್ಲಿ ಖಾಯಂ ವಿಕೆಟ್ ಕೀಪರ್ ಆಗಿ ಉಳಿದಿದ್ದರು..“ಈ ಪಯಣದಲ್ಲಿ ಏರಿಳಿತಗಳು, ಗೆಲುವುಗಳು ಮತ್ತು ಸೋಲುಗಳು ನನ್ನನ್ನು ಇಂದಿನ ವ್ಯಕ್ತಿಯಾಗಿಸಿದೆ.. ಎಲ್ಲವೂ ಕೊನೆಗೊಳ್ಳುತ್ತದೆ, ಆದ್ದರಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಸಹಾ ಹೇಳಿದ್ದಾರೆ..