ಯಾದಗಿರಿ : ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಬಸಣ್ಣ ಕಾಳಪ್ಪ ಕಂಚಗಾರ (86) ಅವರು ಗುರುವಾರ ನಿಧನರಾಗಿದ್ದಾರೆ.ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಬಸಣ್ಣ ಕಾಳಪ್ಪ ಕಂಚಗಾರ ಅವರಿಗೆ ಪತ್ನಿ, 4 ಜನ ಪುತ್ರರು ಮತ್ತು 2 ಹೆಣ್ಣು ಮಕ್ಕಳಿದ್ದಾರೆ.
ಸಗರ ನಾಡಿನ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿರುವ ಬಸಣ್ಣ ಕಾಳಪ್ಪ ಕಂಚಗಾರ ಅವರು 1939 ಜೂನ್ 1 ರಂದು ಜನಿಸಿದ್ದರು. ಬಸಣ್ಣ ಕಂಚಗಾರ ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಂಚಗಾರ ಅವರಿಗೆ 2014 ರಲ್ಲಿ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು.
ಕಂಚಗಾರ ಅವರು ತಯಾರಿಸಿದ ವಿವಿಧ ಬಗೆಯ ಕಾಷ್ಟ ಶಿಲ್ಪಗಳು :
ಅಪರೂಪದ ಕಾಷ್ಟ ಶಿಲ್ಪಿಗಳಲ್ಲಿ ಹಿರಿಯರಾಗಿದ್ದ ಬಸಣ್ಣ ಕಂಚಗಾರ ಅವರು ವಿವಿಧ ಬಗೆಯ ದೇವರ ಮೂರ್ತಿಗಳನ್ನು ತಮ್ಮ ಕಲಾ ಕೌಶಲದ ಮೂಲಕ ಚಿತ್ರಿಸುವಲ್ಲಿ ಹೆಸರು ವಾಸಿಯಾಗಿದ್ದರು. ಕಂಚಗಾರ, ಕಂಬಾರಿಕೆ, ಎರಕ ಮತ್ತು ವಿವಿಧ ಶಿಲ್ಪ ಕಲಾ ಕೃತಿಗಳನ್ನು ಮಾಡುವುದದಲ್ಲಿ ಮುಂಚೂಣಿಯಲ್ಲಿದ್ದರು