ಈ ದೇಶ ಒಂದು ಧರ್ಮದ ರಾಷ್ಟ್ರವಾಗಿದೆ. ಇದಕ್ಕಿಂತ ಅಪಾಯ ಮತ್ತೊಂದಿಲ್ಲ ಎಂದು, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನ ಬಹಳ ಗಟ್ಟಿಯಾಗಿದೆ. ಕೆಲವು ಜನ ಮಾತ್ರ ಒಂದು ಧರ್ಮದ ರಾಷ್ಟ್ರವಾಗಬೇಕೆಂದು ಬಯಸುತ್ತಿದ್ದಾರೆ. ಬಹುಸಂಖ್ಯಾತರು ಸೌಹರ್ದತೆ, ಸೋದರರಂತೆ ಬಾಳಬೇಕೆಂದು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ನಾವು ನೆಮ್ಮದಿಯಾಗಿರಬೇಕೆಂದರೆ ಸಂವಿಧಾನವನ್ನು ನಾವು ರಕ್ಷಣೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ರಾಜಕೀಯ ಲಾಭಕ್ಕಾಗಿ ಈ ದೇಶವನ್ನು ಕೇವಲ, ಒಂದು ಧರ್ಮದ ರಾಷ್ಟ್ರವನ್ನಾಗಿ ಮಾಡಬೇಕೆಂದು ಹೊರಟಿದ್ದಾರೆ. ಭಾರತದ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ಎಂದು ಹೇಳಿದ್ದಾರೆ