ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಿಡಿದೆದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಯತ್ನಾಳ್, ನನಗೆ ನೋಟಿಸ್ ಬಂದಿದೆ ಅಂತಾ ಹೇಳೋಕೆ ವಿಜಯೇಂದ್ರ ಯಾರು? ನನಗೆ ನೋಟಿಸ್ ಬಂದಿರುವ ವಿಚಾರ ಅವನಿಗೆ ಹೇಗೆ ಗೊತ್ತು. ಹಾಗಿದ್ದರೆ, ನನಗೆ ನೋಟಿಸ್ ಬರಲು ವಿಜಯೇಂದ್ರ ತಾನೆ ಕಾರಣ.. ನೋಟಿಸ್ ಹಿಂದಿನ ಶಕ್ತಿ ಅವನೇ ತಾನೇ ಎಂದು ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
ನನಗೆ ಎರಡು ಬಾರಿ ಫೇಕ್ ನೋಟಿಸ್ ರಿಲೀಸ್ ಮಾಡಿಸಿದ್ದೇ ಅವನು. ಇವಾಗಿನ ನೋಟಿಸ್ ಬಗ್ಗೆ ನಾನು ಏನು ಹೇಳುವುದಿಲ್ಲ. ಇವತ್ತು ಸಭೆ ಸೇರ್ತಿದ್ದೇವೆ, ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡ್ತೀವಿ ಎಂದು ಮತ್ತೆ ವಿಜಯೇಂದ್ರ ವಿರುದ್ಧ ಯತ್ನಾಳ್ ಏಕ ವಚನದಲ್ಲೇ ವಾಗ್ದಾಳಿಯನ್ನ ನಡೆಸಿದ್ದಾರೆ.