ದೇಶ

ಜೈಲರ್‌ 2 ಸಿನಿಮಾಗೆ ತ್ರಿಮೂತ್ರಿಗಳ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರ..!

2023 ರಲ್ಲಿ ಬಿಡುಗಡೆಯಾದ ಜೈಲರ್ ಸಿನಿಮಾ ಗಲ್ಲಪೆಟ್ಟಿಗೆಯನ್ನ ಕೊಳ್ಳೆಹೊಡೆದಿತ್ತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಜೈಲರ್‌ ಯಶಸ್ಸನ್ನ ಕಂಡಿತ್ತು. ನಿನಿಮಾ ಫಾರ್ಮ್ನಿಂದ ಹೊರಗುಳಿದಿದ್ದ ರಜಿನಿಗೆ ಮಾಸ್‌ ಮಸಾಲಾ ಜೈಲರ ಸಿನಿಮಾ ಉಸಿರು ನೀಡಿತ್ತು

'ಸೂಪರ್ ಸ್ಟಾರ್‌' ರಜನಿಕಾಂತ್ ಅಭಿನಯದ  ಜೈಲರ್‌ 2 ಸಿನಿಮಾ ಟೀಸರ್‌ ಬಿಡುಗಡೆಯಾದ ದಿನದಿಂದ ಸಂಭಾವನೆ ವಿಚಾರಕ್ಕೆ ಹೆಚ್ಚು ಚರ್ಚೆಯಾಗುತ್ತಿದೆ. ಮೂರು ಸ್ಥಂಭದಂತಿದ್ದ ರಜನಿಕಾಂತ್, ಅನಿರುದ್ಧ್ ಮತ್ತು ನೆಲ್ಸನ್ ರಿಂದ ಜೈಲರ್‌ ಸಿನಿಮಾ ಸೂಪರ್‌ ಡೂಪರ್‌ ಹಿಟ್‌ ಕಂಡಿತ್ತು. ಜೈಲರ್‌ನಲ್ಲಿ ಈ ತ್ರಿಮೂರ್ತಿಗಳು ಒಳ್ಳೆಯ ಸಂಭಾವನೆಯನ್ನೇ ಜೇಬಿಗಿಳಿಸಿದ್ರು. ಈಗ ಜೈಲರ್2‌ ಘೋಷಣೆಯಾಗಿದ್ದು, ಮೂವರ ಸಂಭಾವನೆಯ ಬಗ್ಗೆ ಒಂದಿಷ್ಟು ವದಂತಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ. ಕ್ರೇಜಿ ಸಂಭಾವನೆ ಕುರಿತ ವದಂತಿಗಳ ಬಗ್ಗೆ ಇಲ್ಲಿದೆ ಇಂಟ್ರಸ್ಟಿಂಗ್‌ ವಿಚಾರಗಳು.

2023 ರಲ್ಲಿ ಬಿಡುಗಡೆಯಾದ ಜೈಲರ್ ಸಿನಿಮಾ ಗಲ್ಲಪೆಟ್ಟಿಗೆಯನ್ನ ಕೊಳ್ಳೆಹೊಡೆದಿತ್ತು. ಯಾರೂ ನಿರೀಕ್ಷಿಸದ ರೀತಿಯಲ್ಲಿ ಜೈಲರ್‌ ಯಶಸ್ಸನ್ನ ಕಂಡಿತ್ತು. ನಿನಿಮಾ ಫಾರ್ಮ್ನಿಂದ ಹೊರಗುಳಿದಿದ್ದ ರಜಿನಿಗೆ ಮಾಸ್‌ ಮಸಾಲಾ ಜೈಲರ ಸಿನಿಮಾ ಉಸಿರು ನೀಡಿತ್ತು. ನಿರ್ದೇಶಕ ನೆಲ್ಸನ್ ಕೂಡ ಈ ಸಿನಿಮಾ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು. ಇನ್ನೂ ಅನಿರುದ್ಧ್ ಅವರ ಸಂಗೀತಾದಿಂದ ಜೈಲರ್‌ ಸಿನಿಮಾ ಧೂಳೆಬ್ಬಿಸಿತ್ತು. ಅನಿರುದ್‌ ಹಿನ್ನೆಲೆ ಸಂಗೀತ ಚಿತ್ರವನ್ನು ಬೇರೆ ಲೆವೆಲ್‌ಗೆ ಕೊಂಡೊಯ್ದಿತ್ತು ಅಂದ್ರೂ ಕೂಡ ತಪ್ಪಾಗಲ್ಲ. 

ಮಾಸ್ ಡೈಲಾಗ್ ಮೂಲಕ ಮಾಸ್ ಪ್ರಿಯರಿಗೆ ರಸದೌತಣ ಬಡಿಸಿದ್ದ ಜೈಲರ್ ಬಾಕ್ಸ್ ಆಫೀಸ್ ಕೊಳ್ಳೆಹೊಡೆದಿದ್ದು, 600 ಕೋಟಿಗೂ ಹೆಚ್ಚು ಹಣವನ್ನ ದೋಚಿತ್ತು.  ಸಿನಿಮಾ ಭರ್ಜರಿ ಯಶಸ್ಸು ಕಂಡ ಹಿನ್ನೆಲೆ ಸಿನಿಮಾ ತಯಾರಕರು ರಜನಿಕಾಂತ್, ನೆಲ್ಸನ್ ಮತ್ತು ಅನಿರುದ್ಧ್ ಅವರಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡಿದರು. ಜೊತಗೆ ಹೆಚ್ಚುವರಿ ಚಕ್‌ಗಳನ್ನ ಕೂಡ ನೀಡಿದ್ದರು.. ಹಾಗಾಗಿ ಜೈಲರ್‌ನಲ್ಲಿ ಈ ತ್ರಿಮೂತ್ರಿಗಳು ಒಂದೊಳ್ಳೆ ಸಂಭಾವನೆಯನ್ನೇ ಜೇಬುತುಂಬಿಸಿಕೊಂಡಿದ್ದಂತು ಸತ್ಯ.

ಈಗ, ಜೈಲರ್ 2 ಕೂಡ ಬಿಡುಗಡೆಗೆ ಸಿದ್ಧವಾಗಿರುವುದರಿಂದ, ಮೂವರಿಗೆ ಉತ್ತಮ ಸಂಭಾವನೆ ನೀಡಲಾಗಿದೆ ಎಂಬುದು ಸ್ಪಷ್ಟವಾಗಿದೆ. ನೆಲ್ಸನ್ ಅವರ ಸಂಭಾವನೆ ಬಗ್ಗೆ ಯಾವುದೇ ಅಧಿಕೃತ ಮೂಲಗಳು ಖಚಿತಪಡಿಸಿಲ್ಲ, ಆದ್ರೆ, ನಿರ್ದೇಶಕರು 60 ಕೋಟಿಗಳಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ . ಇದು ನಿಜವಾಗಿದ್ದರೆ, ಈ ಮೊತ್ತವು ಅವರನ್ನು ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಿರ್ದೇಶಕರ ಪಟ್ಟಿಯಲ್ಲಿ ಸೇರಿಸುತ್ತದೆ. 

ಇನ್ನೂ, ಅನಿರುದ್ಧ್‌ ವಿಷಯಕ್ಕೆ ಬಂದರೆ, ಸಂಗೀತ ಸಂಯೋಜನೆಯಲ್ಲಿ ಈಗಾಗಲೇ ಎಆರ್ ರೆಹಮಾನ್ ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಸಂಗೀತ ನಿರ್ದೇಶಕ ಎಂಬ ಪಟ್ಟಿಯನ್ನ ಸೇರಿದ್ದಾಗಿದೆ.. ಜೈಲರ್ ಚಿತ್ರದಲ್ಲಿನ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತಕ್ಕಾಗಿ ಅವರು 10 ಕೋಟಿ ಸಂಭಾವನೆ ಪಡೆದಿದ್ದರು ಎಂದು ವರದಿ ಕೂಡ ಆಗಿತ್ತು. ಇನ್ನೂ ಈಗಿನ ವದಂತಿಗಳ ಪ್ರಕಾರ ಅನಿವೃದ್ಧ್‌  ಜೈಲರ್2ಗೆ 18 ಕೋಟಿ ಸಂಭಾವನೆ ಪಡೆದಿದ್ದಾರೆ , ಜೈಲರ್‌ಗೆ ಹೋಲಿಸಿದರೆ ಅನಿರುದ್ಧ್‌ ಸಂಭಾವನೆ 80% ನಷ್ಟು ಹೆಚ್ಚಳವಾಗಿದೆ ಎಂದು ಅಂದಾಜು ಮಾಡಲಾಗಿದೆ. 

ಜೈಲರ್ ಚಿತ್ರಕ್ಕಾಗಿ, ಸೂಪರ್‌ ಸ್ಟಾರ್‌ ರಜನಿಕಾಂತ್ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆದಿದ್ರಂತೆ. ಹಾಗೂ ಚಿತ್ರ ಯಶಸ್ಸು ಕಂಡ ಬಳಿಕ ಅವ್ರಿಗೆ ಇನ್ನೂ ಹೆಚ್ಚಿನ ಸಂಭಾವನೆಯನ್ನ ಉಡುಗೊರೆಯಾಗಿ ನೀಡಲಾಗಿತ್ತು. ಹಾಗಾಗಿ ಜೈಲರ್ 2 ಸಂಭಾವನೆಯು 200 ಕೋಟಿಗಳಿಗಿಂತ ಹೆಚ್ಚಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಕೆಲವು ವದಂತಿಗಳು ಹರಿದಾಡುತ್ತಿವೆ. ರಜಿನಿ ಏನಾದ್ರೂ 200 ಕೋಟಿ ಪಡೆದಿದ್ದು ನಿಜವಾಗಿದ್ರೆ, ಇದು ದ ಗ್ರೇಟೆಸ್ಟ್ ಆಫ್ ಆಲ್ ಟೈಮ್‌ಗಾಗಿ ದಳಪತಿ ವಿಜಯ್ ಅವರ 200 ಕೋಟಿ ಸಂಭಾವನೆಯನ್ನು ಹಿಂದಿಕ್ಕಬಹುದು.