ಕರ್ನಾಟಕ

ಕಾಲು ಜಾರಿ ಕೆರೆಗೆ ಬಿದ್ದು ನಾಪತ್ತೆಯಾದ ಯುವತಿ ಪತ್ತೆ..!

ಮೈದಾಳ ಕೆರೆ ಕೋಡಿ ನೋಡಲು ತೆರಳಿದ್ದ ಯುವತಿ ಅದೇ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ಸತತ ಕಾರ್ಯಾಚರಣೆ ಬಳಿಕ ಯುವತಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ.

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದ ಯುವತಿ ಪತ್ತೆಯಾಗಿದ್ದಾಳೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಎಂಬುವರ, 19 ವರ್ಷದ ಮಗಳು ಹಂಸಾ ನಿನ್ನೆ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ಸಮೀಪದಲ್ಲಿರುವ ಮೈದಾಳ ಕೆರೆ ಕೋಡಿ ನೋಡಲು ತೆರಳಿದ್ದರು. ಅದೇ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಿಂದ ಯುವತಿ ಪಾರಾಗಿದ್ದಾಳೆ.