ದೇಶ

ರಾಮನೂರು ಅಯೋಧ್ಯೆಯಲ್ಲಿ ಯುವತಿ ಅತ್ಯಾಚಾರ, ಭೀಕರ ಕೊಲೆ

2 ದಿನಗಳ ನಂತರ ಅಯೋಧ್ಯೆಯ ಸಹ್ನಾವಾ ಗ್ರಾಮದ ಕಾಲುವೆಯೊಂದರಲ್ಲಿ ಯುವತಿಯ ಮೃತದೇಹದ ಮೇಲೆ ಬಟ್ಟೆ ಇಲ್ಲದೆ ಪತ್ತೆಯಾಗಿತ್ತು. ಕಣ್ಣುಗುಡ್ಡೆ ಕಿತ್ತುಹಾಕಲಾಗಿದ್ದು, ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿರುವ ಸ್ಥಿತಿ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.

ಉತ್ತರಪ್ರದೇಶದ ಅಯೋಧ್ಯೆಯ ಸಹ್ನಾವಾ ಗ್ರಾಮದ ಹೊರವಲಯದಲ್ಲಿ 22 ವರ್ಷದ ಯುವತಿಯನ್ನು ಅತ್ಯಾಚಾರಗೈದು ಕಣ್ಣುಗುಡ್ಡೆ ಕಿತ್ತು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿದ್ದ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿ ಭೀಕರವಾಗಿ ಕೊಲೆಗೈಯ್ಯಲಾಗಿದೆ. ಯುವತಿ ಗುರುವಾರ ರಾತ್ರಿಯಿಂದಲೇ ನಾಪತ್ತೆಯಾಗಿದ್ದಳು.. ಈ ಕುರಿತು ಪೋಷಕರು ದೂರು ನೀಡಿದ್ದರು. ಆದರೆ ದೂರು ಸ್ವೀಕರಿಸಿದ ಪೊಲೀಸರು, ನಿಮ್ಮ ಮಗಳನ್ನು ನೀವೇ ಹುಡುಕಿಕೊಳ್ಳಿ ಎಂದು ಹೇಳಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ 2 ದಿನಗಳ ನಂತರ ಅಯೋಧ್ಯೆಯ ಸಹ್ನಾವಾ ಗ್ರಾಮದ ಕಾಲುವೆಯೊಂದರಲ್ಲಿ ಯುವತಿಯ ಮೃತದೇಹದ ಮೇಲೆ ಬಟ್ಟೆ ಇಲ್ಲದೆ ಪತ್ತೆಯಾಗಿತ್ತು. ಕಣ್ಣುಗುಡ್ಡೆ ಕಿತ್ತುಹಾಕಲಾಗಿದ್ದು, ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿರುವ ಸ್ಥಿತಿ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ.