ವೈರಲ್

ಸಿಗರೇಟ್‌ ವಿಚಾರಕ್ಕೆ ಯುವಕನಿಗೆ ಮಾರಣಾಂತಿಕ ಹಲ್ಲೆ..!

ಮಾರಣಾಂತಿಕ ಹಲ್ಲೆ ಮಾಡಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ, ತನಿಖೆಗಿಳಿದ ಹೆಚ್.ಎ.ಎಲ್‌ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ, ತನಿಖೆಗಿಳಿದ ಹೆಚ್.ಎ.ಎಲ್‌ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಗಲಾಟೆ ಹಿಂದಿನ ಕಾರಣ ಬೆಳಕಿಗೆ ಬಂದಿದೆ.  ಸಿಗರೇಟ್‌ ವಿಚಾರಕ್ಕೆ ಯುವಕರ ನಡುವೆ ಗಲಾಟೆ ನಡೆದಿದೆ ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ, ಹಲ್ಲೆ ಮಾಡಿದ್ದ ಆದರ್ಶ್ ಆದೇಶ್, ಚಂದ್ರ ಶೇಖರ್, ಪವನ್ ಬಂಧನವಾಗಿದ್ದು ಉಳಿದ ಇಬ್ಬರಿಗೆ ಶೋಧ ನಡೆಯುತ್ತಿದೆ. 

ಹಲ್ಲೆಗೊಳಗಾದ ರಾಜೇಶ್ ದಾಸ್ ಆರೋಪಿ ಆದರ್ಶ್ ಬಳಿ ಸಿಗರೇಟ್ ಕೇಳಿದ್ದನಂತೆ. ಆಗ ಕೊಡಲ್ಲ ಎಂದಿದ್ದಕ್ಕೆ ರಾಜೇಶ್‌ ದಾಸ್‌ ಹಲ್ಲೆ ಮಾಡಿದ್ದಾನೆ. ನವೆಂಬರ್ 17ರಂದು ಮದ್ಯದ ಅಮಲಿನಲ್ಲಿದ್ದ ರಾಜೇಶ್ ಗೆ ಮತ್ತೆ ಆದರ್ಶ್ ಸಿಗ್ತಾನೆ. ಆವಾಗ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ರಾಜೇಶ್ ದಾಸ್ ಗೆ, ಆದರ್ಶ್ ಜೊತೆ 4 ಹುಡುಗರು ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡ್ತಾರೆ ಎನ್ನುವುದು ಬೆಳಕಿಗೆ ಬಂದಿದೆ.