ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಮೂವರ ಸಾವು ಪ್ರಕರಣ ಸಂಬಂಧ ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದ ಮೇಲುಕೋಟೆಯಲ್ಲಿ ಮಾತನಾಡಿದ ಅವರು , ಮೃತರಿಗೆ ಶಾಸಕ ಗಣಿಗ ರವಿ ವೈಯಕ್ತಿಕವಾಗಿ ಪರಿಹಾರ ಕೊಟ್ಟಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ. ಯುವಕರು ಸ್ವಲ್ಪ ಎಚ್ಚರಿಕೆಯಿಂದ ಪ್ರವಾಸ ಮಾಡಬೇಕು. ಕೆಟ್ಟಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತವೆ. ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರೂ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಹಾಗಾಗಿ ಪ್ರಯಾಣದ ವೇಳೆ ಎಚ್ಚರಿಕೆ ವಹಿಸಬೇಕೆಂದು ಮನವಿಯನ್ನ ಮಾಡಿದ್ದಾರೆ.
ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ ಮಾಡದ ವಿಚಾರ ಈಗಾಗಲೇ ಎಸ್ಟಿಮೆಂಟ್ ಸಿದ್ದವಾಗಿದೆ. ಆ ಜಾಗದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆದಾರ ಲೇಟ್ ಮಾಡಿದ್ದಾರೆ ಅಂತೆ, ತಕ್ಷಣ ಮಾಡೋದಕ್ಕೆ ಹೇಳುತ್ತೇವೆ. ಉಳಿದಂತೆ ಅಲ್ಲಲ್ಲೇ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಪಾಂಡವಪುರದ ಬಳಿ ಅಪಘಾತ ಆಗಿತ್ತು, ಅಲ್ಲಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಎಲ್ಲಲ್ಲಿ ಮುಖ್ಯವಾಗಿ ಆಗಬೇಕು ಅಲ್ಲಿ ಮಾಡುವಂತೆ ಹೇಳಿದ್ದೇನೆ.ಈ ತಿಂಗಳೊಳಗೆ ಮಂಜೂರಾತಿ ಕೊಡಲು ಡಿಸಿಗೆ ತಿಳಿಸಿದ್ದೀನಿ ಎಂದು ಸಚಿವ ಚಲುವರಾಸ್ವಾಮಿ ಹೇಳಿದ್ದಾರೆ.