ಕರ್ನಾಟಕ

ವಕ್ಫ್ ಆಸ್ತಿ ಹಂಚಲು ಅವರಪ್ಪನ ಆಸ್ತಿಯಲ್ಲ: ಯತ್ನಾಳ್ V/S ಜಮೀರ್ ಸಮರ

ವಕ್ಫ್ ಮಂಡಳಿಯ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಿ ಎನ್ನಲು, ಇದೇನು ಯತ್ನಾಳ್ ಅವರ ಅಪ್ಪನ ಆಸ್ತಿಯಲ್ಲ ಎಂದು ಜಮೀರ್ ಅಹಮದ್ ಕಿಡಿ ಕಾರಿದ್ದಾರೆ.

ವಕ್ಫ್ ಮಂಡಳಿಯ ಜಾಗವನ್ನು ಬಡವರಿಗೆ ಹಂಚಿ ಎಂದು ಹೇಳಿದ್ದ ಶಾಸಕ, ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಚಿವ ಜಮೀರ್ ಅಹಮದ್ ತಿರುಗೇಟು ಕೊಟ್ಟಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಯ ಭೂಮಿಯನ್ನು ಬಡವರಿಗೆ ಹಂಚಿಕೆ ಮಾಡಿ ಎನ್ನಲು, ಇದೇನು ಯತ್ನಾಳ್ ಅವರ ಅಪ್ಪನ ಆಸ್ತಿಯಲ್ಲ ಎಂದು ಕಿಡಿ ಕಾರಿದ್ದಾರೆ.

ಅಲ್ಲದೇ ಇದು ನನ್ನಪ್ಪನ ಆಸ್ತಿಯೇ ಆಗಿದ್ದರೂ ಹಂಚಬಹುದು, ಯತ್ನಾಳ್ ಅಪ್ಪನ ಆಸ್ತಿಯೇ ಆಗಿದ್ರೂ ಹಂಚಬಹುದಿತ್ತು. ಇದು ನನ್ನಪ್ಪನ ಆಸ್ತಿಯೂ ಅಲ್ಲ. ಯತ್ನಾಳ್ ಅಪ್ಪನ ಆಸ್ತಿಯೂ ಅಲ್ಲ ಎಂದಿದ್ದಾರೆ.