ವಿದೇಶ

ಚುನಾವಣಾ ಕ್ಯಾಂಪಿಯನ್ ನಡುವೆ ಅಡುಗೆ ಮಾಡಿದ 'ಡೊನಾಲ್ಡ್ ಟ್ರಂಪ್'

ಅವರು ಔಟ್ಲೆಟ್ ಒಳಗೆ ಹೋದಾಗ ಅಲ್ಲಿದ್ದ ನೌಕರರು ಆಶ್ಚರ್ಯಚಕಿತರಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದರ ನಂತರ, ಡೊನಾಲ್ಡ್ ಟ್ರಂಪ್ ಕೆಲವು ಔಟ್ಲೆಟ್ ಗಳ ಕಡೆಗೆ ಕೆಲಸ ಮಾಡಿದರು ಮತ್ತು ಇತರ ಉದ್ಯೋಗಿಗಳೊಂದಿಗೆ ಮಾತನಾಡಿದರು. ಬಳಿಕ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಅವರು ಸದ್ಯ ಚುನಾವಣಾ ಪ್ರಚಾರದ ಬ್ಯುಸಿ ನಡುವೆಯು ಮೆಕ್ಡೊನಾಲ್ಡ್ಸ್ ಫ್ರೈ ಕುಕ್ ಆಗಿ ಕೆಲಸ ಮಾಡಿದ್ದಾರೆ. ಈ ಕುರಿತ ವಿಡಿಯೋ ಇಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಡುಗೆ ಮಾಡಿದ ಬಳಿಕ ವಾಹನ ಚಾಲನೆಯಲ್ಲಿದ್ದವರಿಗೆ ಊಟವನ್ನೂ ಕೊಡುತ್ತಿರುವುದು ವೈರಲ್ ಆಗಿದೆ. ಔಟ್‌ ಲೆಟ್‌ ನಲ್ಲಿ ಸ್ವಲ್ಪ ಸಮಯ ಕಳೆದ ನಂತರ, ಡೊನಾಲ್ಡ್ ಟ್ರಂಪ್ ಅವರು "ಕಮಲಾಗಿಂತ 15 ನಿಮಿಷ ಹೆಚ್ಚು ಕೆಲಸ ಮಾಡಿದ್ದಾರೆ" ಎಂದು ಹೇಳಿದರು.

ಟ್ರಂಪ್ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಗಿದ್ದು, ಡೆಮಾಕ್ರಟಿಕ್ ಪಕ್ಷವು ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಅವರು ಔಟ್ಲೆಟ್ ಒಳಗೆ ಹೋದಾಗ ಅಲ್ಲಿದ್ದ ನೌಕರರು ಆಶ್ಚರ್ಯಚಕಿತರಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇದರ ನಂತರ, ಡೊನಾಲ್ಡ್ ಟ್ರಂಪ್ ಕೆಲವು ಔಟ್ಲೆಟ್ ಗಳ ಕಡೆಗೆ ಕೆಲಸ ಮಾಡಿದರು ಮತ್ತು ಇತರ ಉದ್ಯೋಗಿಗಳೊಂದಿಗೆ ಮಾತನಾಡಿದರು. ಬಳಿಕ ತಮ್ಮ ಎದುರಾಳಿ ಕಮಲಾ ಹ್ಯಾರಿಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.