ಕ್ರೀಡೆಗಳು

IND vs NZ: ವರ್ಷದಲ್ಲಿ ಸಾವಿರ ರನ್; ಇತಿಹಾಸ ಬರೆದ ಭಾರತ ತಂಡದ ಆಟಗಾರ ಯಶಸ್ವಿ ಜೈಸ್ವಾಲ್

ಪುಣೆ ಟೆಸ್ಟ್‌ನ ಎರಡನೇ ದಿನದಂದು 30 ರನ್‌ಗಳ ಇನ್ನಿಂಗ್ಸ್ ಆಡಿದ ಜೈಸ್ವಾಲ್, ಈ ಮೂಲಕ 2024ರಲ್ಲಿ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ 2024 ರಲ್ಲಿ ಇದುವರೆಗೆ ಆಡಿರುವ 10 ಟೆಸ್ಟ್‌ಗಳಲ್ಲಿ 59.23 ಸರಾಸರಿ ಮತ್ತು 76 ಸ್ಟ್ರೈಕ್ ರೇಟ್‌ನಲ್ಲಿ 1007 ರನ್ ಗಳಿಸಿದ್ದಾರೆ.

ಪುಣೆಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 30 ರನ್ಗಳ ಇನ್ನಿಂಗ್ಸ್ ಆಡಿದರು. ಜೈಸ್ವಾಲ್ಗೆ ಉತ್ತಮ ಆರಂಭ ಸಿಕ್ಕ ಹೊರತಾಗಿಯೂ ಅದನ್ನು ಬಿಗ್ ಇನ್ನಿಂಗ್ಸ್ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. ಆದಾಗ್ಯೂ ಜೈಸ್ವಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಪುಣೆ ಟೆಸ್ಟ್‌ನ ಎರಡನೇ ದಿನದಂದು 30 ರನ್‌ಗಳ ಇನ್ನಿಂಗ್ಸ್ ಆಡಿದ ಜೈಸ್ವಾಲ್, ಈ ಮೂಲಕ 2024ರಲ್ಲಿ ಟೆಸ್ಟ್‌ನಲ್ಲಿ 1000 ರನ್ ಪೂರೈಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ 2024 ರಲ್ಲಿ ಇದುವರೆಗೆ ಆಡಿರುವ 10 ಟೆಸ್ಟ್‌ಗಳಲ್ಲಿ 59.23 ಸರಾಸರಿ ಮತ್ತು 76 ಸ್ಟ್ರೈಕ್ ರೇಟ್‌ನಲ್ಲಿ 1007 ರನ್ ಗಳಿಸಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ನ ಜೋ ರೂಟ್ 14 ಟೆಸ್ಟ್‌ಗಳಲ್ಲಿ 60 ಸರಾಸರಿಯಲ್ಲಿ 1305 ರನ್ ಗಳಿಸಿದ್ದಾರೆ. ಈ ವರ್ಷ ರೂಟ್, 5 ಶತಕ ಮತ್ತು 4 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ವರ್ಷ ಮುಲ್ತಾನ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಿದ ಟೆಸ್ಟ್‌ನಲ್ಲಿ ರೂಟ್ ಗರಿಷ್ಠ 262 ರನ್ಗಳ ಇನ್ನಿಂಗ್ಸ್ ಕೂಡ ಆಡಿದ್ದರು.