ಕರ್ನಾಟಕ

ಶಿಗ್ಗಾವಿ ಕಾರ್ಯಕರ್ತರಲ್ಲಿ ಭಿನ್ನಮತವಿಲ್ಲ, ಖಾದ್ರಿ ಖುದ್ದು ನನ್ನೊಂದಿಗೆ ಮಾತಾಡಿದ್ದಾರೆ: ಡಿಕೆ ಶಿವಕುಮಾರ್ ಸ್ಪಷ್ಟನೆ

ಚನ್ನಪಟ್ಟಣದದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಗೆಲುವಿನ ಅವಕಾಶಗಳ ಮೇಲೆ ಪ್ರಭಾವ ಬೀರಲಿದೆಯೇ ಅಂತ ಮಾಧ್ಯಮಗಳು ಕೇಳಿದಾಗ, ಸ್ಪಷ್ಟವಾಗಿ ಉತ್ತರ ನೀಡದ ಡಿಸಿಎಂ ಡಿಕೆ ಶಿವಕುಮಾರ್, ಅವರನ್ನು ಸ್ಪರ್ಧಿಸಬೇಡ ಅನ್ನೋದಿಕ್ಕಾಗುತ್ತೆಯೇ? ಅವರ ಪಾಡು ಅವರ ಜೊತೆ ಅಂತ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಶಿಗ್ಗಾವಿಯಲ್ಲಿ ಅಜ್ಜಂಪೀರ್ ಖಾದ್ರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿಲ್ಲ, ಯಾರೋ ಬೆಂಬಲಿಗರು ಅವರ ಪರವಾಗಿ ನಾಮಪತ್ರ ಸಲ್ಲಿಸಿದ್ದಾರಂತೆ, ಖುದ್ದು ಖಾದ್ರಿ ತನ್ನೊಂದಿಗೆ ಮಾತಾಡಿದ್ದಾರೆ, ಅಲ್ಲೇನೂ ಭಿನ್ನಮತವಿಲ್ಲ, ಯಾವುದೇ ಕಾರ್ಯಕರ್ತ ಬಂಡಾಯವೆದ್ದಿಲ್ಲ, ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತಾರೆ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಗೆಲ್ಲಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.