ದೇಶ

ಕನ್ನಡ ನಟನಿಗೆ ಇದೆಂಥಾ ಅಪಮಾನ: ಹೈದ್ರಾಬಾದ್ ​ನಲ್ಲಿ ಕಪಾಳಮೋಕ್ಷ..!

ಕನ್ನಡದ ಹೆಸರಾಂತ ಪೋಷಕ ನಟ ಎನ್‌ ಟಿ ರಾಮಸ್ವಾಮಿ ಅವರು ತಮ್ಮ ಇತ್ತೀಚಿನ ತೆಲುಗು ಚಿತ್ರ ಲವ್ ರೆಡ್ಡಿ ಪ್ರದರ್ಶನವೊಂದಕ್ಕೆ ಟೀಂ ಜತೆ ಹಾಜಾರಾಗಿದ್ದರು. ಎನ್‌ ಟಿ ರಾಮಸ್ವಾಮಿ ಅವರನ್ನು ನೋಡುತ್ತಿದ್ದಂತೆ ಮಹಿಳೆಯೊಬ್ಬರು ಏಕಾಏಕಿ ಬಂದು ನಟನಿಗೆ ಥಳಿಸಿ, ಕಪಾಳಮೋಕ್ಷ ಮಾಡಿದ್ದಾರೆ.

‘ಲವ್ ರೆಡ್ಡಿ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ ಕನ್ನಡದ ನಟ ಎನ್‌ ಟಿ ರಾಮಸ್ವಾಮಿ ಅವರಿಗೆ ನೋಡುತ್ತಿದ್ದಂತೆ ಮಹಿಳೆಯೊಬ್ಬರು ಏಕಾಏಕಿ ಬಂದು ನಟನಿಗೆ ಥಳಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.   

ಹೌದು, ಕನ್ನಡದ ಹೆಸರಾಂತ ಪೋಷಕ ನಟ ಎನ್‌ ಟಿ ರಾಮಸ್ವಾಮಿ ಅವರು ತಮ್ಮ ಇತ್ತೀಚಿನ ತೆಲುಗು ಚಿತ್ರ ಲವ್ ರೆಡ್ಡಿ ಪ್ರದರ್ಶನವೊಂದಕ್ಕೆ ಟೀಂ ಜತೆ ಹಾಜಾರಾಗಿದ್ದರು. ಎನ್‌ ಟಿ ರಾಮಸ್ವಾಮಿ ಅವರನ್ನು ನೋಡುತ್ತಿದ್ದಂತೆ ಮಹಿಳೆಯೊಬ್ಬರು ಏಕಾಏಕಿ ಬಂದು ನಟನಿಗೆ ಥಳಿಸಿ, ಕಪಾಳಮೋಕ್ಷ ಮಾಡಿದ್ದಾರೆ.

ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ, ರಾಮಸ್ವಾಮಿ ಮತ್ತು ಇತರ ಚಿತ್ರತಂಡದವರು ಹೈದರಾಬಾದ್‌‌ ನ ಥಿಯೇಟರ್‌ ವೊಂದಕ್ಕೆ ಭೇಟಿ ಕೊಟ್ಟಿದ್ದಾರೆ. ಕೆಲವು ಪ್ರೇಕ್ಷಕರು ಸಿನಿಮಾ ನೋಡುವಾಗ ತುಂಬ ತಲ್ಲೀನರಾಗಿ ನೋಡುತ್ತಾರೆ. ಪಾತ್ರಗಳನ್ನು ಅತ್ಯಂತ ಗಂಭಿರವಾಗಿ ತೆಗೆದುಕೊಳ್ಳುತ್ತಾರೆ. ಆದರೆ ಮಹಿಳೆಯೊಬ್ಬರು ಪಾತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನಟನಿಗೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ.


`ಲವ್ ರೆಡ್ಡಿ’ ಸಿನಿಮಾ ಅಕ್ಟೋಬರ್ 18ರಂದು ರಿಲೀಸ್ ಆಗಿತ್ತು. ಇದೊಂದು ಲವ್ ಕಮ್ ಎಮೋಷನಲ್ ಸ್ಟೋರಿ ಆಗಿರುವುದಿಂದ ತೆಲುಗು ಪ್ರೇಕ್ಷಕರು ಕೂಡ ಇಷ್ಟ ಪಟ್ಟಿದ್ದಾರೆ. ಹೀಗಾಗಿ ಚಿತ್ರತಂಡ ಥಿಯೇಟರ್‌ ಗೆ ಭೇಟಿ ನೀಡಿತ್ತು. ಕನ್ನಡದ ನಟ ಎನ್‌ ಟಿ ರಾಮಸ್ವಾಮಿ ‘ಲವ್ ರೆಡ್ಡಿ’ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ವಿಲನ್ ಪಾತ್ರವನ್ನು ನಿಭಾಯಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ  ರಾಮಸ್ವಾಮಿ ಸಹ ನಟರೊಂದಿಗೆ ಥಿಯೇಟರ್‌ ನಲ್ಲಿ ನಿಂತಿದ್ದು, ಮಹಿಳೆಯೊಬ್ಬರು ಏಕಾಏಕಿ ನಟನ ಬಳಿಗೆ ಬಂದು ಕಪಾಳ ಮೋಕ್ಷ ಮಾಡಿದ ವಿಡಿಯೋ ಭಾರೀ ವೈರಲ್ ಆಗಿದೆ.