ವಿದೇಶ

ಇಸ್ರೇಲ್ ವೈಮಾನಿಕ ದಾಳಿಗೆ ಗಾಜಾ ನಿರಾಶ್ರಿತರ ಶಿಬಿರದಲ್ಲಿದ್ದ 33 ಮಂದಿ ದಾರುಣ ಸಾ*ವು

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಾಸ್ಸಲ್ ಅವರು ತಿಳಿಸಿದ್ದಾರೆ.

ಗಾಜಾ : ಇಸ್ರೇಲ್ ಸೇನೆಯ ವೈಮಾನಿಕ ದಾಳಿಗೆ ಗಾಜಾದ ಉತ್ತರದಲ್ಲಿರುವ ಜಬಾಲಿಯಾ ಬಳಿ ಇರುವ ನಿರಾಶ್ರಿತರ ಶಿಬಿರದಲ್ಲಿದ್ದ 33 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಗಾಜಾ ನಾಗರಿಕ ರಕ್ಷಣಾ ಸಂಸ್ಥೆ  ಮಾಹಿತಿ ನೀಡಿದೆ.  ವೈಮಾನಿಕ ದಾಳಿಯಲ್ಲಿ 33 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರ ಮಹ್ಮದ್ ಬಾಸ್ಸಲ್  ಅವರು ತಿಳಿಸಿದ್ದಾರೆ.