ದೇಶ

ಅಟ್ಟಹಾಸ ಮೆರೆಯುತ್ತಿರುವ ಉಗ್ರ ಸಂದೇಶಗಳು..ಒಂದೇ ದಿನದಲ್ಲಿ 79 ವಿಮಾನಗಳ ಮೇಲೆ ಬೆದರಿಕೆ..!

ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ, 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ.

ಇ-ಮೇಲ್ ಬಾಂಬ್ ಬೆದರಿಕೆ ಅಟ್ಟಹಾಸ ಮುಂದುವರಿದಿದೆ. ದಿನಕ್ಕೊಂದರಂತೆ ಬರುತ್ತಿರುವ ಇ-ಮೇಲ್ ಬೆದರಿಕೆಗಳು ಆತಂಕ ಸೃಷ್ಟಿಸುತ್ತಿವೆ. ಸೋಮವಾರ ರಾತ್ರಿಯಿಂದ ಮಂಗಳವಾರ ರಾತ್ರಿವರೆಗೆ, 79 ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ. ಅಂದರೆ ಕಳೆದ 9 ದಿನಗಳಿಂದ ಈವರೆಗೆ 170 ಬೆದರಿಕೆ ಸಂದೇಶಗಳು ಬಂದಂತಾಗಿವೆ. 

ವರದಿಯ ಪ್ರಕಾರ ಇಂಡಿಗೋ ವಿಮಾನಕ್ಕೆ 23, ವಿಸ್ತಾರ 21, ಆಕಾಸ 12, ಏರ್ ಇಂಡಿಯಾ 23 ವಿಮಾನಗಳಿಗೆ, ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇವುಗಳಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಕೂಡ ಸೇರಿವೆ. ಅಂತಾರಾಷ್ಟ್ರೀಯ ವಿಮಾನಗಳ ಪೈಕಿ ಸೌದಿ ಅರೇಬಿಯಾದ ಜೆಡ್ಡಾಗೆ ಹೋಗುತ್ತಿದ್ದ 3 ಇಂಡಿಗೋ ವಿಮಾನಗಳನ್ನು ಸೌದಿ ಅರೇಬಿಯಾ ಹಾಗೂ ಕತಾರ್‌ನ ವಿಮಾನ ನಿಲ್ದಾಣಗಳತ್ತ ತಿರುಗಿಸಲಾಗಿದೆ.  ಎಚ್ಚರಿಕೆ ಲಭಿಸುತ್ತಿದ್ದಂತೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಹಾಗೂ ತಪಾಸಣೆ ನಡೆಸಲಾಗಿದೆ. ಆದರೆ ತಪಾಸಣೆ ವೇಳೆ ಎಲ್ಲ ಬೆದರಿಕೆಗಳು ಹುಸಿ ಎಂದು ದೃಢಪಟ್ಟಿವೆ.