ವೈರಲ್

ಲಿಫ್ಟ್​ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದಾರುಣ ಸಾವು

ಮೃತ ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬಾತನ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು : ಲಿಫ್ಟ್ ಗೆ ಅಳವಡಿಸಲು ತೆರೆದಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪದ ದುರ್ಘಟನೆಯೊಂದು ನಡೆದಿದೆ. ಕನ್ನಮಂಗಲ ಗ್ರಾಮ ಪಂಚಾಯತ್ ಮುಂಭಾಗದ ಮಿಲ್ಕ್ ಡೈರಿ ಕಟ್ಟಡ ಕಾಮಗಾರಿ‌ ನಡೆಯುತ್ತಿದ್ದು, ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು 5 ಅಡಿ ಆಳ ಅಗಲದ ಗುಂಡಿ ತೋಡಲಾಗಿತ್ತು. ಗುಂಡಿಯ ಸುತ್ತ ಯಾವುದೇ ಸುರಕ್ಷಿತ ಕ್ರಮ ಇಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಮಾಲೀಕರು ನಿರ್ಲಕ್ಷ್ಯ ತೋರಿದ್ದರು ಎಂಬ ಆರೋಪ ಕೇಳಿಬಂದಿದೆ.

ಲಿಫ್ಟ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಬಿದ್ದು 5 ವರ್ಷದ ಬಾಲಕ ಸಾವು

ಮೃತ ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇರೆಗೆ ಕಟ್ಟಡ ಮಾಲೀಕ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಸುನಿಲ್ ಎಂಬಾತನ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ಬಾಲಕ ಸ್ನೇಹಿತರ ಜೊತೆ ಆಟವಾಡುವಾಗ ಗುಂಡಿಗೆ ಬಿದ್ದಿದ್ದಾನೆ. ಗುಂಡಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದರಿಂದ ನೀರಿನಲ್ಲಿ ಬಾಲಕ ಮುಳುಗಿದ್ದ. ಅಲ್ಲೇ ಇದ್ದ ಸ್ನೇಹಿತರು ತಕ್ಷಣವೇ ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು, ಬಾಲಕನನ್ನ ರಕ್ಷಿಸಿ ಆಸ್ಪತ್ರೆ ಸೇರಿಸಿದ್ದರು. ಆದರೆ, ಬಾಲಕ ಮೃತಪಟ್ಟಿದ್ದಾನೆ.