ದೇಶ

ಕಿಂಗ್ ಕೊಹ್ಲಿನ ನೋಡೋಕೆ 58km ಸೈಕಲ್​ ತುಳಿದು ಬಂದ ಬಾಲಕ

ಕಾರ್ತಿಕ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಬರೋಬ್ಬರಿ 58 ಕಿಲೋ ಮೀಟರ್ ಸೈಕಲ್ ತುಳಿದಿದ್ದಾನೆ. 7 ಗಂಟೆಗಳ ಕಾಲ ಸೈಕಲ್​ ತುಳಿದು ಕೊಹ್ಲಿಯನ್ನು ನೋಡಲು ಬಂದಿದ್ದಾನೆ. ಬೆಳಗ್ಗೆ 4 ಗಂಟೆಗೆ ಸೈಕಲ್​ ತುಳಿಯಲು ಪ್ರಾರಂಭಿಸಿದ್ದಾನೆ.

ನವದೆಹಲಿ :  ಉತ್ತರಪ್ರದೇಶದ ಉನ್ನಾವೊದ 15 ವರ್ಷದ ಕಾರ್ತಿಕ್ ಎಂಬ ಬಾಲಕನೊಬ್ಬ ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್ ಸೈಕಲ್ ಏರಿ ಬಂದಿದ್ದಾನೆ. ವಿರಾಟ್ ಕೊಹ್ಲಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಭಾರತದಲ್ಲಿ ಇವರಿಗೆ ಲೆಕ್ಕವಿಲ್ಲದಷ್ಟು ಫ್ಯಾನ್ಸ್ ಇದ್ದಾರೆ ನಮಗೆಲ್ಲ ತಿಳಿದಿದೆ ಇದೆ. ಇನ್ನು ಮೈದಾನಕ್ಕೆ ಇಳಿದಾಗ ಹೇಳುವುದು ಬೇಡ. ಅದರಂತೆಯೇ 15 ವರ್ಷದ ಬಾಲಕನು ಕೊಹ್ಲಿಯನ್ನು ಕಾಣಲು 58 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಕಾರ್ತಿಕ್ ಕೊಹ್ಲಿಯ ಅಪ್ಪಟ ಅಭಿಮಾನಿಯಾಗಿದ್ದು, ಬರೋಬ್ಬರಿ 58 ಕಿಲೋ ಮೀಟರ್ ಸೈಕಲ್ ತುಳಿದಿದ್ದಾನೆ. 7 ಗಂಟೆಗಳ ಕಾಲ ಸೈಕಲ್ ತುಳಿದು ಕೊಹ್ಲಿಯನ್ನು ನೋಡಲು ಬಂದಿದ್ದಾನೆ. ಬೆಳಗ್ಗೆ 4 ಗಂಟೆಗೆ ಸೈಕಲ್ ತುಳಿಯಲು ಪ್ರಾರಂಭಿಸಿದ್ದಾನೆ. ಅಂದಹಾಗೆಯೇ ಕಾರ್ತಿಕ್ 10ನೇ ತರಗತಿ ಓದುತ್ತಿದ್ದು, ಕೊಹ್ಲಿ ನೋಡಲು ಆತನ ಪೋಷಕರು ಒಪ್ಪಿಗೆ ನೀಡಿದ್ದಾರಂತೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬಾಲಕನ ಕತೆಯನ್ನು ಸೆರೆ ಹಿಡಿಯಲಾಗಿದೆ.