ತಾಜಾ ಸುದ್ದಿ

ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುಲು ಈ ಜ್ಯೂಸ್​ ಕೂಡಿಯಿರಿ.!

'ನೆಲ್ಲಿಕಾಯಿ ಮತ್ತು ಕ್ಯಾರೆಟ್ ಜ್ಯೂಸ್'. ನೆಲ್ಲಿಕಾಯಿ ಮತ್ತು ಕ್ಯಾರೆಟ್ ಇವೆರಡೂ ನಮ್ಮ ಆರೋಗ್ಯಕ್ಕೆ ಬಹಳ ​ಪ್ರಯೋಜನಕಾರಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ, ಇದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇತ್ತಿಚಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಹಾಗು ಆಹಾರ ಪದ್ಧಿತಿಯಿಂದ ಕೊಲೆಸ್ಟ್ರಾಲ್ ಸಮಸ್ಯೆ ಬಹುತೇಕ ಜನರನ್ನ ಕಾಡುತ್ತಿದೆ. ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಡಿಎಲ್ ದೇಹದಲ್ಲಿ ಹೆಚ್ಚಾದಂತೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ. ಹಾಗಾದರೆ ಈ ಕೆಟ್ಟ ಕೊಲೆಸ್ಟ್ರಾಲ್ ಅನ್ನು ದೇಹದಿಂದ ತೆಗೆಯಲು ಏನು ಮಾಡಬೇಕು? ನಮ್ಮ ಆಹಾರ ಕ್ರಮ ಹೇಗಿರಬೇಕು ಎಂದು ತಿಳಿದುಕೊಳ್ಳೊಣ ಬನ್ನಿ.

ನಿಮಗೆ ಗೊತ್ತಾ, ನಿಮ್ಮ ರಕ್ತನಾಳಗಳಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದು ಹಾಕಲು ಒಂದು ಜ್ಯೂಸ್ ಕೂಡ ಇದೆ. ಅದನ್ನು ಪ್ರತಿದಿನ ಬೆಳ್ಳಿಗೆ ಕುಡಿಯುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.

ಅದೇ  'ನೆಲ್ಲಿಕಾಯಿ ಮತ್ತು ಕ್ಯಾರೆಟ್ ಜ್ಯೂಸ್'. ನೆಲ್ಲಿಕಾಯಿ ಮತ್ತು ಕ್ಯಾರೆಟ್ ಇವೆರಡೂ ನಮ್ಮ ಆರೋಗ್ಯಕ್ಕೆ ಬಹಳ  ಪ್ರಯೋಜನಕಾರಿ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ, ಇದು ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ಅಲ್ಲಿ ಬೀಟಾ-ಕ್ಯಾರೋಟಿನ್ ಅಂಶ ಇರುತ್ತದೆ, ಇದು ನಮ್ಮ ರಕ್ತನಾಳಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.

ಈ ಜ್ಯೂಸ್ ಮಾಡುವುದು ಹೇಗೆ?

2 ನೆಲ್ಲಿಕಾಯಿ ಮತ್ತು 2 ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು. ನಂತರ ನೆಲ್ಲಿಕಾಯಿಯನ್ನು  ಸಣ್ಣ ತುಂಡುಗಳಾಗಿ ಕತ್ತರಿಸಿ. ಕ್ಯಾರೆಟ್ ಅನ್ನು ಸಹ ಸಣ್ಣ ತುಂಡುಗಳಾಗಿ ಕತ್ತರಿಸಿ. ಅನಂತರ ಇವೆರಡನ್ನೂ ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ರಸವನ್ನು ಫಿಲ್ಟರ್ ಮಾಡಿ ಮತ್ತು ಜೇನುತುಪ್ಪವನ್ನು ಸೇರಿಸಿ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ, ನೀವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೊಡೆದುಹಾಕಬಹುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ಪ್ರತಿ ದಿನ ಈ ಜ್ಯೂಸ್ ಸೇವನೆ ಮಾಡುವುದರಿಂದ ಹೃದಯದ ಆರೊಗ್ಯವನ್ನ ಕಾಪಾಡಿಕೊಳ್ಳಬಹುದು ಮತ್ತು ಹೃದಯಾಘಾತದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಆದ್ದರಿಂದ ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸಿ. ಇದು ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇಂದಿನಿಂದಲೇ ಆರೋಗ್ಯಕರ ರಸವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು ಒಳ್ಳೆಯದು.