ದೇಶ

ಅನುಷ್ಕಾ ಭಜನೆಯಲ್ಲಿ ವಿರಾಟ್ ತಲ್ಲೀನ.!

ಅನುಷ್ಕಾ ಭಜನೆಯಲ್ಲಿ ತಲ್ಲೀನರಾಗಿ ಕೀರ್ತನೆಯನ್ನು ಆನಂದಿಸುತ್ತಿರುವುದು ಮತ್ತು ಅದಕ್ಕೆ ಕೊಹ್ಲಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡಿದ್ದು ಕಂಡುಬಂದಿದೆ. ಟೆಸ್ಟ್​ ಸರಣಿಯಲ್ಲಿ ನ್ಯೂಜಿಲೆಂಡ್​ ವಿರುದ್ದದ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದು, ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಮುಂಬೈನಲ್ಲಿ ನಡೆದ ಭಕ್ತಿ ಕೀರ್ತನೆಯೊಂದರಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಪಾಲ್ಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಭಾನುವಾರ ಬೆಂಗಳೂರು ಟೆಸ್ಟ್ ಮುಕ್ತಾಯಗೊಳ್ಳುತ್ತಿದ್ದಂತೆ ಮುಂಬೈಗೆ ತಲುಪಿದ್ದಾರೆ. ಮುಂಬೈಗೆ ಬಂದಿಳಿದ ವಿರಾಟ್, ಪತ್ನಿ ಅನುಷ್ಕಾ ಶರ್ಮಾ ಜೊತೆ ಕೀರ್ತನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

Virat Kohli and Anushka Sharma spotted attending a live Krishna Das kirtan event in Mumbai 😍🙏 pic.twitter.com/r04RW78UqO

ಭಾನುವಾರ ದೇಶದೆಲ್ಲೆಡೆ ‘ಕರ್ವಾ ಚೌತ್’ ಹಬ್ಬದ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದಂಪತಿ ಕೀರ್ತನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯಿಂದ ಹಬ್ಬವನ್ನು ಆಚರಿಸಿದರು. ಕೃಷ್ಣದಾಸ್ ಅವರ ಕೀರ್ತನಾ ಕಾರ್ಯಕ್ರಮದಲ್ಲಿ ಇಬ್ಬರೂ ಹಾಜರಾಗಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು. ಈ ಜೋಡಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Virat Kohli and Anushka Sharma enjoying the Krishna Das Kirtan event in Mumbai. 🥹❤️pic.twitter.com/8NtWLlNuos

 ಇದರಲ್ಲಿ ಅನುಷ್ಕಾ ಭಜನೆಯಲ್ಲಿ ತಲ್ಲೀನರಾಗಿ ಕೀರ್ತನೆಯನ್ನು ಆನಂದಿಸುತ್ತಿರುವುದು ಮತ್ತು ಅದಕ್ಕೆ ಕೊಹ್ಲಿ ಚಪ್ಪಾಳೆ ತಟ್ಟುವ ಮೂಲಕ ಬೆಂಬಲ ನೀಡಿದ್ದು ಕಂಡುಬಂದಿದೆ. ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ದದ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‌ ಗಳಿಂದ ಸೋಲನುಭವಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಮೊದಲ ಇನ್ನಿಂಗ್ಸ್ ನಲ್ಲಿ ಡಕ್ ಔಟ್ ಆಗಿದ್ದು, ಎರಡನೇ ಇನ್ನಿಂಗ್ಸ್ನಲ್ಲಿ 70 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈಗ ಕೊಂಚ ರಿಲೀಫ್ ಮೂಡಿಗೆ ಜಾರಿದ್ದಾರೆ.