ಕರ್ನಾಟಕ
ದಾಂಧಲೆ ಎಬ್ಬಿಸಿದವರ ಬಂಧಿಸಿ, ಕ್ರಮಕ್ಕೆ ಸೂಚನೆ : ಪರಮೇಶ್ವರ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅರೋಪಕ್ಕೆ ಪ್ರತಿಕ್ರಿಯಿಸಿ, ಅಶೋಕ್ ನೋಡಿಕೊಂಡು ಬರಲಿ. ತದನಂತರ ಏನು ಸಲಹೆ ನೀಡುತ್ತಾರೆ ನೋಡೋಣ. ಮುಸ್ಲಿಮರ ವಿಷಯ ಬಂದಲೆಲ್ಲ ತುಷ್ಟಿಕರಣ ಎಂದು ಹೇಳುತ್ತಾರೆ. ಅವರಿಗೆ ಅದು ಬಿಟ್ಟರೆ ಬೇರೆ ಅಜೆಂಡಾ ಇಲ್ಲ. ಎಲ್ಲ ಸಂದರ್ಭದಲ್ಲಿ ಆ ರೀತಿಯಾಗಿ ಮಾತಾಡುವುದು ಸರಿಯಲ್ಲ ಎಂದರು.
ಬೆಂಗಳೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತ ಸೂಚಿಸಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ರು.
ಇಂದು ಮಾತನಾಡಿದ ಅವರು, ಸೋಷಿಯಲ್ ಮಿಡೀಯಾದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಒಂದು ಸಮುದಾಯವನ್ನು ಕೆರಳಿಸಿದೆ. ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ವಶಕ್ಕೆ ನೀಡುವಂತೆ ಇನ್ನೂರು ಜನ ಠಾಣೆ ಬಳಿ ಬಂದು ಆರೋಪಿಯನ್ನು ಗಲಾಟೆ ಮಾಡಿ, ಕಲ್ಲು ತೂರಿದ್ದಾರೆ. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಕಲ್ಲು ತೂರಾಟ ನಡೆಸಿ ದಾಂಧಲೆ ಎಬ್ಬಿಸಿದವರನ್ನು ಬಂಧಿಸಿ, ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದ್ರು.
ಈ ಘಟನೆಯಲ್ಲಿ ಯಾರದ್ದು ತಪ್ಪು, ಯಾರದ್ದು ಸರಿ ಎಂಬುದನ್ನು ನಾವು ನಿರ್ಧಾರ ಮಾಡಲು ಆಗುವುದಿಲ್ಲ. ಪೊಲೀಸರು ಕಾನೂನು ಪ್ರಕಾರ ಮಾಡಿರುತ್ತಾರೆ. ತಪ್ಪು ಮಾಡಿದ್ದರೆ ಪೊಲೀಸರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಅನೇಕ ಸಂದರ್ಭಗಳಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್, ಪಿಎಸ್ಐಗಳನ್ನು ಅಮಾನತು ಮಾಡಲಾಗಿದೆ. ಪೊಲೀಸರ ಮೇಲು ಕ್ರಮ ಜರುಗಿಸಲಾಗಿದೆ. ಈಗಾಗಲೇ ಕಾನೂನು ಸುವ್ಯವಸ್ಥೆ ಎಡಿಜಿಪಿ ಸ್ಥಳಕ್ಕೆ ಹೋಗಿದ್ದಾರೆ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅರೋಪಕ್ಕೆ ಪ್ರತಿಕ್ರಿಯಿಸಿ, ಅಶೋಕ್ ನೋಡಿಕೊಂಡು ಬರಲಿ. ತದನಂತರ ಏನು ಸಲಹೆ ನೀಡುತ್ತಾರೆ ನೋಡೋಣ. ಮುಸ್ಲಿಮರ ವಿಷಯ ಬಂದಲೆಲ್ಲ ತುಷ್ಟಿಕರಣ ಎಂದು ಹೇಳುತ್ತಾರೆ. ಅವರಿಗೆ ಅದು ಬಿಟ್ಟರೆ ಬೇರೆ ಅಜೆಂಡಾ ಇಲ್ಲ. ಎಲ್ಲ ಸಂದರ್ಭದಲ್ಲಿ ಆ ರೀತಿಯಾಗಿ ಮಾತಾಡುವುದು ಸರಿಯಲ್ಲ ಎಂದರು.
ಭದ್ರಾವತಿ ಶಾಸಕ ಸಂಗಮೇಶ್ ಅವರ ಪುತ್ರ ಮಹಿಳಾ ಅಧಿಕಾರಿಯೊಬ್ಬರಿಗೆ ಅವಾಚ್ಯವಾಗಿ ನಿಂದಿಸಿರುವ ಕುರಿತು ಪ್ರತಿಕ್ರಿಯಿಸಿ, ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂಬುದು ಗೊತ್ತಿದೆ.. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ.. ಈ ಬಗ್ಗೆ ಸ್ಥಳೀಯ ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ. ಎಲ್ಲದಕ್ಕು ಸರ್ಕಾರ ಸೂಚನೆಗಳನ್ನು ನೀಡುವುದಿಲ್ಲ ಎಂದು ತಿಳಿಸಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಅವರು ದೆಹಲಿಗೆ ಹೋಗಿರುವುದಕ್ಕೆ ನಾನು ಹೇಗೆ ಉತ್ತರ ನೀಡಲಿ. ನಾನು ದೆಹಲಿಗೆ ಹೋಗುವಾಗ ಕೇಳಿ ಹೇಳುತ್ತೇನೆ. ನಾವು ಸಚಿವರಿದ್ದೇವೆ. ಆಗಾಗ್ಗೆ ಭೇಟಿ ಮಾಡುತ್ತೇವೆ.. ಸಾರ್ವಜನಿಕವಾಗಿ ಹೇಳಿಕೆ ನೀಡಬೇಡಿ ಎಂದು ಹೈಕಮಾಂಡ್ ಸೂಚಿಸಿದೆ. ಯಾರು ಸಹ ಹೇಳಿಕೆ ನೀಡುತ್ತಿಲ್ಲ ಎಂದು ಹೇಳಿದರು.