ಕರ್ನಾಟಕ

ಉದಯಗಿರಿ ಉದ್ವಿಗ್ನ; ಯಾರೇ ಮಾಡಿದ್ರೂ ಅದು ತಪ್ಪು: ತನ್ವೀರ್‌ ಸೇಠ್

ಸರ್ಕಾರದಿಂದ ಎನೆಲ್ಲಾ ಕ್ರಮ ಆಗ್ಬೇಕೋ ಆಗಿದೆ. ಸಾಮಾಜಿಕ ಜಾಲತಾಣದಲ್ಲಿದ್ದ ಫೊಸ್ಟ್ ತಗೆಯಲಾಗಿದ್ದು, ಪೋಸ್ಟ್‌ ಮಾಡಿರುವ ವ್ಯಕ್ತಿಯನ್ನ ಬಂಧಿಸಲಾಗಿದೆ. ಅವನ ಮೇಲೆ ಎಫ್ ಐ ಆರ್ ದಾಖಲಾಗಿ ಕ್ರಮ ಜರುಗಿಸುವ ಕೆಲಸ ಆಗಿದೆ.

ಮೈಸೂರಿನ ಉದಯಗಿರಿ ಉದ್ವಿಗ್ನ ವಿಚಾರಕ್ಕೆ ಶಾಸಕ ತನ್ವೀರ್‌ ಸೇಠ್‌ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ‌ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಬಂದಿತ್ತು. ದೂರು‌ ಕೊಟ್ಟ ಮೇಲೆ ಸತ್ಯ ಸಂಗತಿಗಳ ನೋಡಿ ಎಪ್ ಐ ಆರ್ ಮಾಡ್ತೀವಿ ಎಂದು ಪೊಲೀಸರು ಹೇಳಿದ್ದರು. ಆದ್ರೆ FIR ವಿಳಂಬ ಆದ ಕಾರಣ 6.30 ಕ್ಕೆ ಪ್ರತಿಭಟನೆ ಆಗಿದೆ. ಈಗಾಗಲೇ ಕ್ರಮ ಆಗಿದೆ ಅಂತ ಪೊಲೀಸರು ಹೇಳಿದ್ರು. ಹೀಗಿದ್ದಾಗಲೂ ಸಮಾಜಾಯಿಸಿಗೆ ಒಪ್ಪಲು ಸಾಧ್ಯವಾಗದೇ 8.30ಕ್ಕೆ ಕಲ್ಲೂತೂರಾಟದಂತಹ ಅಹಿತಕರ ಘಟನೆ ಆಗಿದೆ. ಪೊಲೀಸರು 12.30ರೊಳಗೆ ಪರಿಸ್ಥಿತಿಯನ್ನ ಸಹಜಸ್ಥಿತಿಗೆ ತರುವ ಕೆಲಸ ಮಾಡಿದ್ರು. ಈ ಮದ್ಯದಲ್ಲಿ ಟಯರ್ ಸುಟ್ಟು, ಪೇಪರ್ ಸುಟ್ಟು ಸಾರ್ವಜನಿಕರ ವಾಹನ ಜಖಂ ಮಾಡಿ ಕಲ್ಲುತೂರಾಟ ಮಾಡಲಾಗಿದೆ. ಘಟನೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ,ಅಧಿಕಾರಿಗಳಿಗೆ ಪೆಟ್ಟಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳೋದು ಯಾರೇ ಮಾಡಿದ್ರೂ ಅದು ತಪ್ಪು. ಇದಕ್ಕೆ ಸಮಾಜಾಯಿಷಿ ಕೊಡೋಕೆ ಸಾಧ್ಯವಿಲ್ಲ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.

ಇನ್ನೂ ಸರ್ಕಾರದಿಂದ ಎನೆಲ್ಲಾ ಕ್ರಮ ಆಗ್ಬೇಕೋ ಆಗಿದೆ. ಸಾಮಾಜಿಕ ಜಾಲತಾಣದಲ್ಲಿದ್ದ ಫೊಸ್ಟ್ ತಗೆಯಲಾಗಿದ್ದು, ಪೋಸ್ಟ್‌ ಮಾಡಿರುವ ವ್ಯಕ್ತಿಯನ್ನ ಬಂಧಿಸಲಾಗಿದೆ. ಅವನ ಮೇಲೆ ಎಫ್ ಐ ಆರ್ ದಾಖಲಾಗಿ ಕ್ರಮ ಜರುಗಿಸುವ ಕೆಲಸ ಆಗಿದೆ. ಯಾವುದೇ ಪರಿಸ್ಥಿತಿ ಬಂದ್ರೂ ಸಹ ನೀವು ನಂಬಿರೋ ಸಮುದಾಯದ ನಾಯಕರನ್ನ ಭೇಟಿಯಾಗಿ. ಸಮಸ್ಯೆ ಇತ್ಯರ್ಥಗೊಳಿಸುವ ಕೆಲಸ ಮಾಡಬೇಕು. ಅದು ಆಗಿಲ್ಲ ಅಂದ್ರೆ ಬೇರೆ ರೀತಿಯಲ್ಲಿ ಕ್ರಮ ತಗೆದುಕೊಳ್ಳುವ ಕೆಲಸವನ್ನ ನಾವು ಮಾಡ್ತೀವಿ. ಏಕಾಏಕಿ ಈ ಘಟನೆ ಆದ್ರೆ ಪೊಲೀಸರಿಗೆ ಕಷ್ಟ. ಇಂತಹ ಘಟನೆಗೆ ಅವಕಾಶ ಮಾಡಿಕೊಡದೇ ಶಾಂತಿ  ಕಾಪಾಡಲು ಸಹಕಾರ ಕೊಡಬೇಕು ಎಂದು ತನ್ವೀರ್‌ ಸೇಠ್‌ ಮನವಿ ಮಾಡಿದ್ದಾರೆ.