ಕರ್ನಾಟಕ

ದೆಹಲಿ ಬಿಜೆಪಿಯಲ್ಲಿ ಒಗ್ಗಟ್ಟು.. ಕರ್ನಾಟಕ ಬಿಜೆಪಿಯಲ್ಲಿ ಒಡಕು; ಸದಾನಂದಗೌಡ ಅಭಿಪ್ರಾಯ

ಕರ್ನಾಟಕದ ಭಿನ್ನಮತ ಹಾಗೂ ದೆಹಲಿಯಲ್ಲಿ ಆಗಿರುವ ಬಿಜೆಪಿ ಜಯದ ಕುರಿತು, ಮಾಜಿ ಸಿಎಂ ಸದಾನಂದಗೌಡ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಕರ್ನಾಟಕದ ಭಿನ್ನಮತ ಹಾಗೂ ದೆಹಲಿಯಲ್ಲಿ ಆಗಿರುವ ಬಿಜೆಪಿ ಜಯದ ಕುರಿತು, ಮಾಜಿ ಸಿಎಂ ಸದಾನಂದಗೌಡ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪಕ್ಷ ಸಂಘಟನೆ, ಜನಪರ ರಾಜಕೀಯ ಹಾಗೂ ಬೂತ್‌ ಮಟ್ಟದ ತಂತ್ರ, ನಾಯಕತ್ವದಿಂದ ದೆಹಲಿಗೆ ಗೆಲುವಾಗಿದೆ.  ಆದರೆ ಕರ್ನಾಟಕದಲ್ಲಿ ಇದಕ್ಕೆ ವಿರುದ್ಧವಾದ ಸ್ಥಿತಿ ಇದೆ. ಆಂತರಿಕ ಕಲಹ, ಸಂಘಟನಾತ್ಮಕ ದೌರ್ಬಲ್ಯವಿದೆ. ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಧಾನ ಇದೆ..ಸ್ವಂತ ರಾಜಕೀಯ ಲಾಭಕ್ಕೆ ಒಡಕುಂಟು ಮಾಡಲಾಗ್ತಿದೆ. ಇದನ್ನ ಪರಿಗಣಿಸದೇ ಹೋದರೆ ಚುನಾವಣೆಯಲ್ಲಿ ಕಠಿಣ ಸವಾಲು ಎದುರಿಸಬೇಕಾಗುತ್ತದೆ.  ಪಕ್ಷದ ಯಶಸ್ಸು ಯಾರೊಬ್ಬರ ಸಾಧನೆಯಲ್ಲ. ಪಕ್ಷ ಬಲಿಷ್ಠವಾಗಬೇಕಾದರೆ ಎಲ್ಲಾ ನಾಯಕರು ಒಗ್ಗೂಡಬೇಕು. ಜನತೆ ನಮಗೆ ಬೆಂಬಲ ನೀಡಲು ಸಿದ್ದರಿದ್ದಾರೆ..ಆದರೆ ಪಕ್ಷದ ಒಳಾಂಗಣ ಶುದ್ಧವಾಗಬೇಕು ಎಂದು ಸದಾನಂದ ಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.