ಬಳಕುವ ಬಳ್ಳಿಯಂಥ ಮೈಮಾಟ, ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲದ ಸೌಂದರ್ಯಾ, ಕಂಗಳ ಕಾಂತಿಗೆ ಸೊಬಗು ನೀಡಿರುವ ಕಾಮನಬಿಲ್ಲಿನಂಥ ಹುಬ್ಬು. ಮಾದಕ ಚೆಲುವೆಯ ಕೆನ್ನೆಯಲ್ಲಿ ತುಂಟ ನಗೆಯ ಸುಳಿದಾಟ. ‘ಅಬ್ಬಾ ಎಂಥ ಸುಂದರಿ’ ಎಂಬ ಉದ್ಘಾರ ಮನದಲ್ಲಿ ಸದ್ದು ಮಾಡುವುದೂ ಅಷ್ಟೇ ಸಹಜ. ಅಂಥ ಮಾದಕ ಚಲುವೆ ಈ ಅರುಷಿ ನಿಶಾಂಕ್.. ಥೇಟ್ ಸಿನಿಮಾ ನಟಿಯಂತಿರುವ ಈಕೆ, ಉತ್ತರಾಖಂಡ ಮಾಜಿ ಸಿಎಂ ಮಗಳು.. ಹೀರೋಯಿನ್ ರೀತಿ ಕಾಣುವ ಈಕೆಗೆ ನಟನೆಯಲ್ಲಿ ಆಸಕ್ತಿ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್ ದಂಪತಿ ನಿನ್ನ ಟಾಪ್ ಹೀರೋಯಿನ್ ಮಾಡ್ತೇವೆ ಅಂತಾ ನಂಬಿಸಿ ಬರೋಬ್ಬರಿ 4 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ.
ಕ್ಯಾಟ್‌ವಾಕ್ ಮಾಡುತ್ತಲೇ ಮಾಡೆಲಿಂಗ್‌ನಲ್ಲೂ ಗಮನ ಸೆಳೆದಿದ್ದಳು ಅರುಷಿ ನಿಶಾಂಕ್. ಸೌಂದರ್ಯಾ ಗಣಿಯಂತಿರುವ ಈಕೆ ಹೀರೋಯಿನ್ ಆಗುವ ಕನಸು ಕಂಡಿದ್ದವಳು. ಮೊದಲೇ ಕೋಟಿ ಕುಳ. ಮಾಜಿ ಸಿಎಂ ಪುತ್ರಿ ಅನ್ನೋದು ತಿಳಿದಿದ್ದ ಮುಂಬೈನ ವರುಣ್ ಬಾಗ್ಲಾ, ಮಾನ್ಸಿ ಬಾಗ್ಲಾ ಎಂಬುವವರು 4 ಕೋಟಿ ರೂಪಾಯಿ ಹಣ ಪಡೆದು ಪಂಗನಾಮ ಹಾಕಿದ್ದಾರೆ.
ಅಷ್ಟಕ್ಕೂ ಆಗಿದ್ದೇನ್ ಅಂದ್ರೆ, ಅರುಷಿ ನಿಶಾಂಕ್ ಸಿನಿಮಾ ಕನಸು ಕಣ್ತಿದ್ದನ್ನ ತಿಳಿದ್ದ ಇಬ್ಬರು, ಅವರನ್ನ ಡೆಹ್ರಾಡೂನ್ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಮಿನಿ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್‌ನ ಡೈರೆಕ್ಟರ್ ಅಂತಾ ಹೇಳಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರದಲ್ಲಿ ಪ್ರಮುಖ ಪಾತ್ರ ನೀಡೋದಾಗಿ ಬಲೆ ಬೀಸಿದ್ದಾರೆ. ಅಷ್ಟೇ ಅಲ್ಲ. ನೀವು ಹಣ ಹೂಡಿಕೆ ಮಾಡಿದ್ರೆ ಲಾಭದ ಜೊತೆ ವಾಪಸ್ ಕೊಡ್ತೇವೆ ಅಂತಾ ಭರವಸೆ ಕೂಡ ನೀಡಿ, ಬರೋಬ್ಬರಿ 4 ಕೋಟಿ ಪಡೆದಿದ್ದಾರೆ. ಆದ್ರೆ ಚಾನ್ಸ್ ಕೊಡೋದಾಗಿ ಹಣ ಪಡೆದವರು ಮಾತು ಕೊಟ್ಟಂತೆ ಅರುಷಿ ನಿಶಾಂಕ್‌ಗೆ ಸಿನಿಮಾದಲ್ಲಿ ಅವಕಾಶ ಕೊಡ್ಬೇಕಿತ್ತು. ಆದ್ರೆ ಕೊಟ್ಟಿಲ್ಲ. ದಿನ ಕಳೆದಂತೆ, ಫಿಲ್ಮ್ ಮೇಕರ್ ಎಂದು ಹೇಳಿಕೊಂಡಿದ್ದ ವರುಣ್ ಬಾಗ್ಲಾ, ಈಕೆಗೆ ಮೆಸೇಜ್ ಕಳಿಸಿದ್ದಾನೆ. ನಿಮಗೆ ನೀಡ್ಬೇಕಾಗಿದ್ದ ನಾಯಕಿ ಪಾತ್ರ ಬೇರೆಯರಿಗೆ ನೀಡಿದ್ದೇವೆ, ಬಾಕಿ ಇರುವ ಸಿನಿಮಾ ಶೂಟಿಂಗ್ ಯುರೋಪ್‌ನಲ್ಲಿ ಚಿತ್ರೀಕರಿಸುವ ಪ್ಲಾನ್ ಇದೆ ಅಂತಾ ಹೇಳಿ ಸೈಲೆಂಟ್ ಆಗಿದ್ದಾನೆ.
ಹೀರೋಯಿನ್ ಆಗ್ತೇನೆ ಅಂದುಕೊಂಡಿದ್ದ ಅರುಷಿ ನಿಶಾಂಕ್‌ಗೆ, ವರುಣ್ ಬಾಗ್ಲಾ ಮೆಸೇಜ್ ಓದ್ತಿದ್ದತೆ ಕನಸು ನುಚ್ಚುನೂರಾಗಿದೆ. ಈ ಬೆನ್ನಲ್ಲೇ ತಮ್ಮಿಂದ ಪಡೆದಿದ್ದ ಬರೋಬ್ಬರಿ 4 ಕೋಟಿ ಹಣ ವಾಪಸ್ ನೀಡುವಂತೆ ಕೇಳಿದ್ದಾಳೆ. ಇದಕ್ಕೆ ಕೆರಳಿರುವ ವರುಣ್ ಬಾಗ್ಲಾ ಕೊಲೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ರೊಚ್ಚಿಗೆದ್ದ ಸುರಸುಂದರಿ ಅರುಷಿ ನಿಶಾಂಕ್, ಸೀದಾ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅಂದಗಾತಿ ಠಾಣೆ ಮೆಟ್ಟಿಲೇರಿದ್ದೇ ತಡ ಇತ್ತ ಖತರ್ನಾಕ್ ಬಾಗ್ಲಾ ಜೋಡಿ ಎಸ್ಕೇಪ್ ಆಗಿದ್ದಾರೆ. ಗೊಂಬೆಯಂತಿರುವ ಅರುಷಿ ನಿಶಾಂಕ್, ಕನಸು ನುಚ್ಚುನೂರಾಗಿದೆ. ನಟಿ ಆಗ್ತೇನೆ ಎಂದಿಕೊಂಡಿದ್ದವರು ಮಕ್ಮಲ್ ಟೋಪಿ ಹಾಕಿಸಿಕೊಂಡಿದ್ದಾಳೆ.