ಕರ್ನಾಟಕ

ದೆಹಲಿಯ ಚುನಾವಣೆ ರಿಸಲ್ಟ್.. ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಸೇಫ್..!?

ಗ್ಯಾರಂಟಿ ಮೂಲಕ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಪ್ರಯತ್ನಿಸಿದ್ರೂ ಯಾವುದೇ ಲಾಭ ಸಿಕ್ಕಿಲ್ಲ. ಚುನಾವಣಾ ಗೆಲುವಿಗಾಗಿ ಉಚಿತ ಘೋಷಣೆ, ಭರ್ಜರಿ ಪ್ರಚಾರದ ನಡುವೆಯೂ ಕಾಂಗ್ರೆಸ್‌ಗೆ ಸಿಕ್ಕ ಸ್ಥಾನ ಮಾತ್ರ ಶೂನ್ಯ. ಕರ್ನಾಟಕದ ರೀತಿಯಲ್ಲೇ ಗ್ಯಾರಂಟಿ ಘೋಷಣೆ ಮಾಡಿದ್ರು ಕೈಪಡೆ ಯಶಸ್ವಿಯಾಗಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆ ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಿದೆ. ಗ್ಯಾರಂಟಿ ಮೂಲಕ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಪ್ರಯತ್ನಿಸಿದ್ರೂ ಯಾವುದೇ ಲಾಭ ಸಿಕ್ಕಿಲ್ಲ. ಚುನಾವಣಾ ಗೆಲುವಿಗಾಗಿ ಉಚಿತ ಘೋಷಣೆ, ಭರ್ಜರಿ ಪ್ರಚಾರದ ನಡುವೆಯೂ ಕಾಂಗ್ರೆಸ್‌ಗೆ ಸಿಕ್ಕ ಸ್ಥಾನ ಮಾತ್ರ ಶೂನ್ಯ. ಕರ್ನಾಟಕದ ರೀತಿಯಲ್ಲೇ ಗ್ಯಾರಂಟಿ ಘೋಷಣೆ ಮಾಡಿದ್ರು ಕೈಪಡೆ ಯಶಸ್ವಿಯಾಗಿಲ್ಲ. ರಾಷ್ಟ್ರಮಟ್ಟದಲ್ಲಿಯೇ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದ್ದು, ಅಧಿಕಾರದಲ್ಲಿರುವ ಕರ್ನಾಟಕದ ರಾಜಕೀಯ ಮೇಲೆ ಪರಿಣಾಮ ಬೀರಿದೆ. ದಿಲ್ಲಿ ಚುನಾವಣೆ ಹೀನಾಯ ಸೋಲಿನಿಂದಾಗಿ ಸಿಎಂ ಕುರ್ಚಿ ಫೈಟ್‌ಗೆ ತಾತ್ಕಾಲಿಕವಾಗಿ ಬ್ರೇಕ್‌ ಬೀಳಲಿದೆ ಎನ್ನಲಾಗಿದೆ. ಕಾಂಗ್ರೆಸ್‌ಗೆ ದೇಶದಲ್ಲಿ ಪೂರಕ ವಾತಾವರಣ ಇಲ್ಲ, ಅಧಿಕಾರದಲ್ಲಿರುವ ಸಿದ್ದರಾಮಯ್ಯರನ್ನ ಕುರ್ಚಿಯಿಂದ ಕೆಳಗಿಳಿಸಿ ಪ್ರಬಲ ಅಭ್ಯರ್ಥಿ ಕೂರಿಸೋದು ಒಳ್ಳೆಯದಲ್ಲ ಎನ್ನಲಾಗ್ತಿದೆ. ದೆಹಲಿಯ ಫಲಿತಾಂಶ ಹೈಕಮಾಂಡ್‌ಗೆ ಮತ್ತಷ್ಟು ಸಂಕಷ್ಟ ತಂದಿದ್ದು, ರಾಜ್ಯ ಸರ್ಕಾರದಲ್ಲಿ ಬದಲಾವಣೆ ತಂದ್ರೆ ಮತ್ತಷ್ಟು ಎಡವಟ್ಟು ಆಗುವ ಸಾಧ್ಯತೆ ಇದೆ. ಹೀಗಾಗಿ ವರಿಷ್ಠರು ಸಿಎಂ ಬದಲಾವಣೆ ಚರ್ಚೆಯಿಂದ ಹಿಂದೆ ಸರಿದಿದ್ದು, ಸಿಎಂ ಸಿದ್ದರಾಮಯ್ಯ ಕುರ್ಚಿ ಮತ್ತಷ್ಟು ಸೇಫ್ ಎನ್ನಲಾಗಿದೆ.