ಸೈಫ್ ಅಲಿ ಖಾನ್ ಅವರ ಮೇಲೆ ಜನವರಿ 16ರಂದು ದಾಳಿ ನಡೆದಿತ್ತು. ಕಳ್ಳತನಕ್ಕೆಂದು ಬಂದಿದ್ದಾತ ಸೈಫ್ ಅವರ ಮೇಲೆ ಆರು ಬಾರಿ ಚಾಕುವಿನಿಂದ ದಾಳಿ ಮಾಡಿದ್ದ. ಈ ದಾಳಿ ಬಳಿಕ ಸೈಫ್ ಲೀಲಾವತಿ ಆಸ್ಪತ್ರೆಗೆ ಆಟೋ ಮೂಲಕ ತೆರಳಿದ್ದರು. ಆದರೆ ಈ ಬಗ್ಗೆ ಈಗ ಸಾಕಷ್ಟು ಚರ್ಚೆಗಳು ಶುರುವಾಗಿದ್ದು, ಅನೇಕರ ಅನುಮಾನಕ್ಕೆ ಸೈಫ್ ಅಲಿಖಾನ್ ಉತ್ತರ ನೀಡಿದ್ದಾರೆ.
‘ಸೈಫ್ ಅಲಿ ಖಾನ್ ಮನೆಯಲ್ಲಿ ಡ್ರೈವರ್ ಕೂಡ ಇರಲಿಲ್ಲವಾ? ಅವರ ಬಳಿ ಐಷಾರಾಮಿ ಕಾರಿದ್ದರೂ ಏಕೆ ಆಟೋದಲ್ಲಿ ತೆರಳಿದ್ರು. ಬೆನ್ನಿನ್ನಲ್ಲಿ ಒಂದೂವರೆಗೆ ಗಂಟೆ ಚಾಕುವಿನ ಪೀಸ್ ಇಟ್ಟುಕೊಂಡು ಏನು ಮಾಡುತ್ತಿದ್ದರು ಎನ್ನುವ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗಳಿಗೆಲ್ಲಾ ಸೈಫ್ ಅಲಿ ಖಾನ್ ಅವರು ದೆಹಲಿ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.
ನಮ್ಮ ಮನೆಯಲ್ಲಿ ಡ್ರೈವರ್ ಉಳಿದುಕೊಳ್ಳೊದಿಲ್ಲ. ಎಲ್ಲರಿಗೂ ಅವರದ್ದೇ ಆದ ಮನೆ ಇದೆ. ನಮ್ಮ ಮನೆಯಲ್ಲಿ ಕೆಲಸದವರ ಪೈಕಿ ಕೆಲವರು ಉಳಿದುಕೊಳ್ಳುತ್ತಾರೆ. ಆದರೆ, ಕಾರು ಚಾಲಕರು ಇರೋದಿಲ್ಲ. ಕೆಲವೊಮ್ಮೆ ಮಧ್ಯರಾತ್ರಿ ಎಲ್ಲಾದರೂ ಹೋಗೋದಿದ್ದರೆ ಮಾತ್ರ ಅವರ ಬಳಿ ಉಳಿದುಕೊಳ್ಳಿ ಎನ್ನುತ್ತೇನೆ. ಇನ್ನೂ ನನಗೆ ಕೀ ಸಿಕ್ಕಿದ್ದರೆ ನಾನೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ. ಅದೃಷ್ಟವಾಶತ್ ಕೀ ಸಿಗಲಿಲ್ಲ.. ನಾನು ಮೂರು ಗಂಟೆಗೆ ಚಾಲಕರಿಗೆ ಕರೆ ಮಾಡಿ ಬನ್ನಿ ಎಂದು ಹೇಳಬಹುದಿತ್ತು. ಆದರೆ, ಅವರು ಬರೋಕೆ ಸಮಯ ಬೇಕಲ್ಲ. ನಾನು ತುರ್ತಾಗಿ ಆಸ್ಪತ್ರೆಗೆ ಸೇರಬೇಕಿತ್ತು ಎಂದು ಸೈಫ್ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.