ಕರ್ನಾಟಕ

ಜಾತಿ ಗಣತಿ ಜಾರಿಗೆ ಹಿಂದೇಟು..ಡಾ. ಜಿ.ಪರಮೇಶ್ವರ್‌ ಸ್ಪಷ್ಟನೆ..!

ಜಾತಿ ಗಣತಿ ಜಾರಿಗೆ ಹಿಂದೇಟು ಹಾಕುತ್ತಿರುವ ವಿಚಾರದ ಬಗ್ಗೆ, ಗೃಹಸಚಿವ ಡಾ. ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಜಾತಿ ಗಣತಿ ಜಾರಿಗೆ ಹಿಂದೇಟು ಹಾಕುತ್ತಿರುವ ವಿಚಾರದ ಬಗ್ಗೆ, ಗೃಹಸಚಿವ ಡಾ. ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ. ಜಾತಿ ಗಣತಿ ಜಾರಿ ಮಾಡಲು ಸಂದರ್ಭ ಬರಬೇಕು. ಇಂಟರ್‌ನೆಟ್‌ನಲ್ಲಿ ಒಂದಷ್ಟು ಚರ್ಚೆಯಾಗಬೇಕು. ಕ್ಯಾಬಿನೆಟ್‌ನಲ್ಲಿ ಅದರ ಬಗ್ಗೆ ಚರ್ಚೆಯಾಗಬೇಕು. ಆಮೇಲೆ ಅದನ್ನು ಹೊರಗೆ ತರಬೇಕು. ಬೇರೆ ಬೇರೆ ಸಬ್ಜೆಕ್ಟ್‌ಗಳೆಲ್ಲ ಚರ್ಚೆಯಾಗುತ್ತಿದೆ. ಪ್ರಿಯಾರಿಟಿ ಮೇಲೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಸಿಎಂ ಅನಾರೋಗ್ಯ ಹಿನ್ನೆಲೆ, ಕ್ಯಾಬಿನೆಟ್‌ ಸಭೆಗಳನ್ನು ಮುಂದಕ್ಕೆ ಹಾಕಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.