ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸಂಭ್ರಮ ಜೋರಾಗಿದೆ. ಒಬ್ಬೊಬ್ಬರೇ ಜೋಡಿಗಳು ಹಸೆಮಣೆ ಏರುತ್ತಿದ್ದಾರೆ. ಈ ಮಧ್ಯೆ ಸೀತಾರಾಮ ಧಾರಾವಾಹಿಯ ಮೂಲಕ ಕನ್ನಡಿಗರ ಮನಗೆದ್ದಿದ್ದ ನಟಿ ಮೇಘನಾ ಶಂಕರಪ್ಪ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಯಾವಾಗಲು ಜಾಲಿ ಜಾಯಿಯಾಗಿದ್ದು, ತಂಟಾಟ ಮಾಡುವ ನಟಿ ಮೇಘನಾ ಶಂಕರಪ್ಪ ಇಂಜಿನಿಯರ್ ಆಗಿರುವ ಜಯಂತ್ ಅವರ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಎರಡು ಕುಟುಂಬದ ಹಿರಿಯರ ಸಮ್ಮುಖದಲ್ಲಿ ಇಬ್ಬರು ಹಸೆಮಣೆಗೆ ಏರಿದ್ದಾರೆ. ಮದುವೆಗೆ ಸ್ನೇಹಿತರು, ಸಂಬಂಧಿಗಳು, ಕಿರುತೆರೆಯ ನಟ, ನಟಿಯರು ಆಗಮಿಸಿ ನವ ಜೋಡಿ ಹಾರೈಸಿದ್ದಾರೆ.