ವಿರೋಧ ಪಕ್ಷದ ನಾಯಕರಾಗಿ ಪಕ್ಷದ ಜವಾಬ್ದಾರಿ ಆರ್. ಅಶೋಕ್ ಅವರಿಗೆ ಇದೆ. ಹೀಗಾಗಿ ಅವರೇ ಪಕ್ಷದಲ್ಲಿನ ಗೊಂದಲವನ್ನ ಬಗೆಹರಿಸಬೇಕು ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಮುನಿರತ್ನ, ಅಶೋಕ್ ಹಿರಿಯರು ಇದ್ದಾರೆ. ಅವರ ಮಾತನ್ನ ಯತ್ನಾಳ್, ರಮೇಶ್ ಜಾರಕಿಹೊಳಿ ಕೂಡ ಕೇಳ್ತಾರೆ ಎಂದಿದ್ದಾರೆ.
ಸುಳ್ಳು ಆರೋಪಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದ್ರೆ ನಮಲ್ಲಿ ನಾವೇ ಬೈದಾಡಿಕೊಂಡು ಓಡಾಡೋ ಪರಿಸ್ಥಿತಿ ಬಂದಿದೆ. ಹಿರಿಯ ನಾಯಕರು ಒಟ್ಟಾಗಿ ಕೇಂದ್ರ ನಾಯಕರ ಬಳಿ ಹೋಗಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಇರೋ ನಾಯಕರೇ ಸಿದ್ದರಾಮಯ್ಯ ವಿರುದ್ಧ ಸ್ನೇಹಮತಿ ಕೃಷ್ಣ ಅವರಿಗೆ ದಾಖಲೆ ಕೊಡ್ತಿದ್ದಾರೆ. ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಲೇ ಬೇಕು ಅಂತ ಹಣ ಕೂಡ ಕೊಡಲಾಗ್ತಿದೆ. ಸಿದ್ದರಾಮಯ್ಯ ಒಂದು ಕಾಲು ಹೊರಗೆ ಇಟ್ರೆ ಕಾಂಗ್ರೆಸ್‌ಗೆ ಮೊದಲಿನ ಪರಿಸ್ಥಿತಿ ಬರುತ್ತೆ. ಹೀಗಾಗಿ ನಮ್ಮಲ್ಲಿರೋ ಪರಿಸ್ಥಿತಿ ಬಗೆಹಿಸಿಕೊಂಡ್ರೆ ಚುನಾವಣೆಗೆ ತಯಾರಿ ನಡೆಸಬಹುದು. ಮೊಗ್ಗಲಮುಳ್ಳೆ ಸಿದ್ದರಾಮಯ್ಯ ಇಳಿಸೋ ಪ್ರಯತ್ನ ಮಾಡ್ತಿದ್ದಾರೆ.. ಅದು ಯಾರು ಅಂತ ಎಲ್ಲಿರಿಗೂ ಗೊತ್ತು. ನಾನು ಇಷ್ಟು ಮಾತನಾಡಿದ್ದೀನಿ ಅಂದ್ರೆ ಈಗ ನನ್ನ ಮೇಲೆ ಇನ್ನೆರಡು ಕೇಸ್ ಹಾಕ್ತಾರೆ ಎಂದು ಕಾಂಗ್ರೆಸ್ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.