ಸಂಡೂರು ಸೋಲಿಗೆ ಮಾಜಿ ಸಿಎಂ ಸದಾನಂದ ಗೌಡ ಆಂತರಿಕ ವರದಿ ಸಲ್ಲಿಸಿದ್ದಾರೆ. ಹೈಕಮಾಂಡ್ ನಾಯಕರಿಗೆ ಸದಾನಂದಗೌಡ ವರದಿ ಸಲ್ಲಿಕೆ ಮಾಡಿದ್ದಾರೆ. ಕೋರ್ ಕಮಿಟಿಯಲ್ಲಿ ಸಂಡೂರು ಸೋಲಿಗೆ ರಾಮುಲು ಕಾರಣ ಎಂದು ಅಗರವಾಲ್ ಹೇಳಿದ್ದರು. ಈ ಬಳಿಕ ಉಸ್ತುವಾರಿ ಮಾತಿಗೆ ಮಾಜಿ ಸಚಿವ ಶ್ರೀರಾಮುಲು ಬಹಿರಂಗವಾಗಿ ಸಿಡಿದೆದ್ದಿದ್ದರು. ಆದರೆ ಬೈ ಎಲೆಕ್ಷನ್‌ನಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ನೀಡಿದ್ದೆ ತಪ್ಪಾಯ್ತಾ ಎಂಬ ಅನುಮಾನ ಬಿಜೆಪಿ ನಾಯಕರಿಗೆ ಶುರುವಾಗಿತ್ತು. ಹಾಗಾಗಿ ಸಂಡೂರು ಸೋಲಿಗೆ ಮಾಜಿ ಸಿಎಂ ಸದಾನಂದ ಗೌಡ ಆಂತರಿಕ ವರದಿ ಸಲ್ಲಿಸಿದ್ದಾರೆ.
ಸಂಡೂರು ಉಪಚುನಾವಣೆ ಸೋಲಿಗೆ ಡಿವಿಎಸ್ ನೀಡಿರೋ ಕಾರಣಗಳೇನು..?
* ಅಭ್ಯರ್ಥಿ ಆಯ್ಕೆಯಲ್ಲಿಯೇ ಎಡವಿದ ಬಿಜೆಪಿ..
* ಸ್ಥಳೀಯರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಭ್ಯರ್ಥಿ ಘೋಷಣೆ..
* ಬಂಗಾರು ಹನುಮಂತು ಹಿಂದೆ ಬಿಜೆಪಿ ವಿರುದ್ಧ ಸ್ಪರ್ಧಿಸಿದ್ರು..
* ಹೀಗಾಗಿ ಬಂಗಾರು ಹನುಮಂತುರನ್ನ ಕಾರ್ಯಕರ್ತರು ಒಪ್ಪಲಿಲ್ಲ..
* ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ನಡುವೆ ಒಳಜಗಳ..
* ಕೊನೆಯ ಐದು ದಿನಗಳಲ್ಲಿ ರಾಮುಲು ಪ್ರಚಾರಕ್ಕೆ ಹೋಗದೆ ಇದ್ದದ್ದು..