ದೇಶ

ಮಹಾ ಕುಂಭಮೇಳ : ರೈಲ್ವೇ ನಿಲ್ದಾಣಗಳು ಫುಲ್‌ ರಶ್..‌ ಕಿಟಕಿ ಗಾಜು ಪುಡಿಪುಡಿ

ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನ ಗಾಜುಗಳನ್ನ ಒಡೆದು ಆಕ್ರೋಶ ಹೊರಹಾಕಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಎಸಿ ಭೋಗಿಯಗಳ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದಿದ್ದಾ

ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಕೋಟ್ಯಂತರ ಭಕ್ತರು ಹರಿದು ಬರುತ್ತಿದ್ದಾರೆ. ರೈಲ್ವೇ ನಿಲ್ದಾಣ, ಬಸ್‌ಸ್ಟಾಂಡ್‌ಗಳಲ್ಲಿ ಕಾಲಿಡಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.  ಅದರಲ್ಲೂ ಲಕ್ಷಾಂತರ ಮಂದಿ ಕುಂಭಮೇಳಕ್ಕೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದು ಪರದಾಡುತ್ತಿದ್ದಾರೆ. ಈ ಮಧ್ಯೆ ಮಹಾಕುಂಭಮೇಳಕ್ಕೆ ಹೋಗಲು, ವಾಪಸಾಗಲು ರೈಲು ಸಿಗದೇ ಜನ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ರೈಲಿನ ಕಿಟಕಿ ಗಾಜುಗಳನ್ನೇ ಒಡೆದಿದ್ದಾರೆ. 

ಬಿಹಾರದ ಮಧುಬನಿ ರೈಲು ನಿಲ್ದಾಣದಲ್ಲಿ ನೆರೆಯ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಮಹಾ ಕುಂಭ ಮೇಳಕ್ಕೆ ತೆರಳುತ್ತಿದ್ದ ರೈಲಿನ ಗಾಜುಗಳನ್ನ ಒಡೆದು ಆಕ್ರೋಶ ಹೊರಹಾಕಿದ್ದಾರೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರೈಲು ಹತ್ತಲು ಸಾಧ್ಯವಾಗದೆ ಸ್ವತಂತ್ರ ಸೇನಾನಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ನ ಎಸಿ ಭೋಗಿಯಗಳ ಮೇಲೆ ಕಲ್ಲು ಎಸೆದು ಕಿಟಕಿಗಳನ್ನು ಒಡೆದಿದ್ದಾರೆ. ಘಟನೆಯ ವೀಡಿಯೊಗಳು  ವೈರಲ್‌ ಆಗಿದ್ದು, ಒಳಗೆ ಕುಳಿತ ಪ್ರಯಾಣಿಕರು ಒಮ್ಮೆಲೆ ಆತಂಕಕ್ಕೆ ಒಳಗಾಗಿದ್ದಾರೆ.